ಬೆಂಗಳೂರು : ಆರೋಪಿಯೊಬ್ಬ ಪರಿಚಯಸ್ಥ ಮಹಿಳೆಯ ಮೊಬೈಲ್ ನಲ್ಲೆ ಆಪ್ ಡೌನ್ಲೋಡ್ ಮಾಡಿ ಬಳಿಕ ವಿಡಿಯೋ ಕಾಲ್ ಮೂಲಕ ಆಕೆಯ ಬೆತ್ತಲೆ ವಿಡಿಯೋ ಇಟ್ಟುಕೊಂಡು ಹಣಕ್ಕೆ ಕಿರುಕುಳ ನೀಡಿದ್ದ ಆರೋಪಿಯ ವಿರುದ್ಧ ಇದೀಗ ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಮಹಿಳೆ ವಿವಾಹಿತೆಯಾಗಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ವೇಳೆ ಮೂರನೇ ವ್ಯಕ್ತಿಯಿಂದ ಆರೋಪಿಯು ಮಹಿಳೆಗೆ ಸ್ನೇಹಿತನಾಗಿದ್ದ. ಕಾಲಕ್ರಮೇಣ ಮೂವರು ಓಡಾಡಿಕೊಂಡಿದ್ದರು. ಈ ವೇಳೆ ಮಹಿಳೆಗೆ ಅರಿವಿಲ್ಲದಂತೆ ಥರ್ಡ್ ಪಾರ್ಟಿ ಅಪ್ಲಿಕೇಷನ್ ಆ್ಯಪ್ ಅನ್ನ ಮಹಿಳೆಯ ಮೊಬೈಲ್ನಲ್ಲಿ ಡೌನ್ಲೋಡ್ ಮಾಡಿ ಆಕೆಗೆ ಅರಿವಿಲ್ಲದಂತೆ ಬೆತ್ತಲೆ ವಿಡಿಯೋ ಮಾಡಿಕೊಂಡಿದ್ದ.
ಈ ನಡುವೆ ಮಹಿಳೆಗೆ ಗೊತ್ತಿಲ್ಲದಂತೆ ಅಪ್ಲೀಕೇಷನ್ ಡೌನ್ಲೋಡ್ ಮಾಡಿ ಮೊಬೈಲ್ನಲ್ಲಿ ಹೈಡ್ ಮಾಡಿದ್ದ. ತುರ್ತು ಫೋನ್ ಬರುವುದೆಂದು ಮಹಿಳೆಯು ಸ್ನಾನದ ಮನೆಯಲ್ಲಿ ಮೊಬೈಲ್ ಇಟ್ಟುಕೊಂಡಿದ್ದರು.ಈ ವೇಳೆ ಆ್ಯಪ್ ಆನ್ ಮಾಡಿಕೊಂಡು ಮೊಬೈಲ್ನಲ್ಲಿ ಸೆರೆಯಾಗುವ ವಿಡಿಯೋ ಹಾಗೂ ಆಡಿಯೊಗಳನ್ನ ಸಂಗ್ರಹಿಸಿದ್ದ. ಈ ವಿಡಿಯೋಗಳನ್ನು ನಿನ್ನ ಸ್ನೇಹಿತ ಕಳಿಸಿದ್ದಾನೆ ಎಂದು ಸುಳ್ಳು ಹೇಳಿದ್ದ ಬಳಿಕ ಮಹಿಳೆ ತನ್ನ ಸ್ನೇಹಿತನ ಕೇಳಿದಾಗ ಆತ ಇದೆಲ್ಲ ಗೊತ್ತಿಲ್ಲ ಅಂತ ತಿಳಿಸಿದ್ದಾನೆ.
ನಂತರ ಕೆಲದಿನಗಳಿಂದ ನಿನ್ನನ್ನು ಪ್ರೀತಿಸುತ್ತಿದ್ದೇನೆ, ಮದುವೆ ಮಾಡಿಕೊಳ್ಳುವಂತೆ ಒತ್ತಾಯಿಸಿದ್ದಾನೆ. ಮದುವೆಗೆ ನಿರಾಕರಿಸಿದರೂ ಬಿಡದೆ ಮಹಿಳೆ ಮೊಬೈಲ್ಗೆ ಅಸಭ್ಯವಾಗಿ ವಾಟ್ಸಾಪ್ ಸಂದೇಶ ಕಳುಹಿಸಿದ್ದಾನೆ. ಬೆತ್ತಲೆ ವಿಡಿಯೋ ತನ್ನ ಬಳಿಯಿದೆ, ಹಣ ನೀಡದಿದ್ದರೆ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುವುದಾಗಿ ಬೆದರಿಕೆವೊಡ್ಡಿದ್ದಾನೆ..7ರಂದು ಕರೆ ಮಾಡಿ ಮಾತನಾಡಬೇಕೆಂದು ರೂಮಿಗೆ ಕರೆಯಿಸಿಕೊಂಡು ಬಲವಂತವಾಗಿ ಲೈಂಗಿಕ ಸಂಪರ್ಕ ಮಾಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ.