ಬೆಂಗಳೂರು : ಹಣಕಾಸಿನ ವಿಚಾರಕ್ಕೆ ಉದ್ಯಮಿ ಒಬ್ಬರಿಗೆ ಗನ್ ತೋರಿಸಿ ಕೊಲೆ ಬೆದರಿಕೆ ಆರೋಪದ್ ಹಿನ್ನೆಲೆಯಲ್ಲಿ ಇದೀಗ ಬೆಂಗಳೂರಲ್ಲಿ ಫೈಟರ್ ರವಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಸದಾಶಿವನಗರ್ ಪೊಲೀಸರಿಂದ ಫೈಟರ್ ರವಿಯನ್ನು ಬಂಧಿಸಲಾಗಿದೆ.ಉದ್ಯಮಿಗೆ ಗನ್ ತೋರಿಸಿ ಹಲ್ಲೆ ನಡೆಸಿದ ಆರೋಪ ಕೇಳಿಬಂದಿತ್ತು.ಉದ್ಯಮಿ ಸೋಮಶೇಖರ್ ಮೇಲೆ ಹಲ್ಲೆ ನಡೆಸಲಾಗಿತ್ತು. ಹಣಕಾಸು ವಿಚಾರಕ್ಕೆ ಕೊಲೆ ಬೆದರಿಕೆ ಆರೋಪ ಕೇಳಿ ಬಂದಿತ್ತು. ಗನ್ ತೋರಿಸಿ ಬೆದರಿಕೆ ಹಾಕಿದ್ದ ಆರೋಪದಡಿ ಇದೀಗ ಪ್ರಕರಣ ಕೂಡ ದಾಖಲಾಗಿದೆ.
ಶ್ರೀಕಾಂತ್ ಎಂಬಾತನಿಗೆ ಸೋಮಶೇಖರ್ 75 ಲಕ್ಷ ಕೊಟ್ಟಿದ್ದರು. ಈ ಒಂದು ಹಣಕಾಸಿನ ವಿಚಾರವಾಗಿ ಫೈಟರ್ ರವಿ ಮಧ್ಯ ಪ್ರವೇಶಿಸಿದ್ದು ಗನ್ ತೋರಿಸಿ ಕೊಲೆ ಬೆದರಿಕೆ ಹಾಕಿದ್ದ. ಹಾಗಾಗಿ ಈ ಒಂದು ಬೆದರಿಕೆ ಪ್ರಕರಣದಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಇದೀಗ ಬೆಂಗಳೂರಿನ ಸದಾಶಿವನಗರ ಠಾಣೆ ಪೋಲೀಸರು ಫೈಟರ್ ರವಿಯನ್ನು ಅರೆಸ್ಟ್ ಮಾಡಿದ್ದಾರೆ.