ದಕ್ಷಿಣಕನ್ನಡ : ಅನಾರೋಗ್ಯದಿಂದ ಬಳಲುತ್ತಿದ್ದ ವಿದ್ಯುತ್ ಗುತ್ತಿಗೆದಾರರೊಬ್ಬರು, ತೀವ್ರ ನೋವು ಅನುಭವಿಸುತ್ತಿದ್ದರು ನೋವು ತಾಳದೆ ತಮ್ಮ ಮನೆಯ ಸಮೀಪ ಇರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದರೆಯ ಕಾರ್ಕಳದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರನ್ನು ಕಾರ್ಕಳ ಏಳ್ನಾಡುಗುತ್ತು ಸತ್ಯಪ್ರಕಾಶ್ ಹೆಗ್ಡೆ (49) ಎನ್ನಲಾಗಿದ್ದು, ಇವರು ಗುರುವಾರ ರಾತ್ರಿ ಸ್ವರಾಜ್ಯ ಮೈದಾನ ಬಳಿಯ ತಮ್ಮ ಮನೆ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೂಡುಬಿದಿರೆಯಲ್ಲಿ ಅನ್ನಪೂರ್ಣೇಶ್ವರಿ ಎಲೆಕ್ಟ್ರಿಕಲ್ಸ್ ಆಯಂಡ್ ಟ್ರಾನ್ಸ್‌ಪೋರ್ಟ್ ಅಂಗಡಿ ಹೊಂದಿದ್ದು, ಎರಡು ದಶಕಗಳಿಂದ ವಿದ್ಯುತ್ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದರು.ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು.ಇದೇ ಚಿಂತೆಯಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.