ಬೆಂಗಳೂರು : ಪರಸ್ತ್ರೀಗಾಗಿ ಪತ್ನಿಯ ಕೊಲೆಗೆ ಯತ್ನಿಸಿದ ಬೆಂಗಳೂರಿನ ಡಿವೈಎಸ್ಪಿ ಗೋವರ್ಧನ್ ಹಾಗೂ ಅವರ ತಂದೆ ತಾಯಿಯ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ Dysp ಗೋವರ್ಧನ್ ಪತ್ನಿ ಅಮೃತ ದೂರು ನೀಡಿದ್ದಾರೆ.
ಪ್ರೊಫೆಷನಲ್ ಡಿವೈಎಸ್ಪಿ ಗೋವರ್ಧನ್ ವಿರುದ್ಧ ಇದೀಗ ಪತ್ನಿ ಗಂಭೀರವಾದ ಆರೋಪ ಮಾಡಿದ್ದಾರೆ. ಪತಿಯ ಜೊತೆಗೆ ಸಂಪರ್ಕದಲ್ಲಿದ್ದ ಮಹಿಳಾ ಪ್ರೊಬೆಷನರಿ ಡಿವೈಎಸ್ಪಿ ವಿರುದ್ಧ ಕೂಡ ಅಮೃತ ದೂರು ನೀಡಿದ್ದಾರೆ. ಅಲ್ಲದೇ ಅತ್ತೆ ಸೀಮೆಎಣ್ಣೆ ಸುರಿದು ಕೊಲೆಗೆ ಯತ್ನಾಸಿದ್ದಾಳೆ ಎಂದು ಆರೋಪಿಸಿದ್ದಾರೆ. ಪರಸ್ತ್ರೀಗೆ ಮಕ್ಕಳಿದ್ದರೂ ತನ್ನ ಪತಿಯ ಜೊತೆಗೆ ಸಲುಗೆಯಿಂದ ಇದ್ದಾರೆ ಎನ್ನುವ ಆರೋಪ ಕೇಳಿ ಬಂದಿದ್ದು, ಪತಿ ಎಲ್ಲೇ ಕೆಲಸಕ್ಕೆ ಸೇರಿದರು ಪತಿಯ ಗೆಳತಿ ಅಲ್ಲಿಗೆ ಬರುತ್ತಿದ್ದಳು.
ಪರಸ್ತ್ರೀ ಸಂಪರ್ಕದಲ್ಲಿ ಇದ್ದಿದ್ದಕ್ಕೆ ಪತ್ನಿ ಅಮೃತ ವಿರೋಧಿಸಿದ್ದಳು ಇದರಿಂದ ಕೋಪಗೊಂಡು Dysp ಗೋವರ್ಧನ್ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಹೊಟ್ಟೆಗೆ ಒಂದು ಡಿವೋರ್ಸ್ ಕೊಡೊದಾಗಿ ಪತಿಯಿಂದ ಬೆದರಿಕೆ ಆರೋಪ ಕೇಳಿ ಬಂದಿದೆ. ಪತಿ ಜೊತೆಗಿನ ಸಹವಾಸ ಬಿಡುವಂತೆ ಆತನ ಗೆಳತಿಗೂ ಕೂಡ ಅಮೃತ ಹೇಳಿದ್ದರು. ಇದಕ್ಕೆ ಗೆಳತಿಯಿಂದ ಗೋವರ್ಧನ್ಗೆ ಡಿವೋರ್ಸ್ ನೀಡಲು ಒತ್ತಾಯ ಕೇಳಿ ಬಂದಿತ್ತು.
ಇಲ್ಲವಾದರೆ ಅಮೃತ ಮೇಲೆ ಸುಳ್ಳು ಕೇಸ್ ಹಾಕಿಸುವ ಬೆದರಿಕೆ ಕೂಡ ಕೇಳಿಬಂದಿತ್ತು. ಈ ಬಗ್ಗೆ ಅತ್ತೆ ಮಾವನ ಬಳಿ ಪತ್ನಿಯ ಅಮೃತ ತನ್ನ ಕಷ್ಟ ಹೇಳಿಕೊಂಡಿದ್ದಳು. ಆದರೆ ಅತಿಯು ಕೂಡ ನನ್ನ ಬೆಂಬಲಕ್ಕೆ ನಿಲ್ಲದೆ ಕೊಲೆಗೆ ಯತ್ನಿಸಿದ್ದಾರೆ ಎಂದು ಅಮೃತ ಆರೋಪಿಸಿದ್ದಾರೆ. ಸೀಮೆ ಎಣ್ಣೆ ಸುರಿದು ಅತ್ತೆಗೆ ಯತ್ನಿಸಿದ್ದಾಳೆ ಎಂದು ಅತ್ಯ ಬಿರುದು ಕೂಡ ಅಮೃತ ಆರೋಪಿಸಿದ್ದಾರೆ. ಈ ಕುರಿತು ಡಿವೈಎಸ್ಪಿ ಗೋವರ್ಧನ್ ಪತ್ನಿ ಅಮೃತ ಅವರು ಬೆಂಗಳೂರಿನ ಹೈ ಗ್ರೌಂಡ್ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪತಿಯ ಸಂಬಂಧದಿಂದ ಬೇಸತ್ತು ಅಮೃತ ಡಿಜಿಗೆ ದೂರು ನೀಡಿದ್ದಾರೆ. ನಂತರ ಇಬ್ಬರಿಗೂ ಸಮನ್ಸ್ ನೀಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಕೆಲ ದಿನಗಳ ನಂತರ ಮತ್ತೆ ಗೋವರ್ಧನ್ ಗೆಳತಿಯ ಜೊತೆ ಸಂಪರ್ಕ ಹೊಂದಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ಪತಿ ಹಾಗೂ ಆತನ ಗೆಳತಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ನನ್ನ ಕೊಲೆಗೆ ಸಂಚು ರೂಪಿಸಿದ್ದಾರೆ ಎಂದು ದೂರು ನೀಡಿದ್ದಾರೆ. ಈ ಕುರಿತು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಗೋವರ್ಧನ್ ಪತ್ನಿ ಅಮೃತ ದೂರು ನೀಡಿದ್ದಾರೆ.