ದಕ್ಷಿಣಕನ್ನಡ : ಕಾಲೇಜು ವಿದ್ಯಾರ್ಥಿನಿಯೋರ್ವಳು ಹಾಸ್ಟೆಲ್ ನಲ್ಲಿ ವೇಲ್ ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಕಳೆದ ಫೆಬ್ರವರಿ 26ರಂದು ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮೃತ ವಿದ್ಯಾರ್ಥಿನಿಯನ್ನು ಖಾಸಗಿ ಡೆಂಟಲ್ ಕಾಲೇಜಿನ ಬಿ.ಡಿ.ಎಸ್. ವಿದ್ಯಾರ್ಥಿನಿ ಬೆಳಗಾವಿ ಮೂಲದ ಕೃತಿಕಾ ನಿಡೋಣಿ (21) ಎಂದು ತಿಳಿದುಬಂದಿದೆ.ಕಳೆದ ಫೆಬ್ರವರಿ 26 ರಂದು ರಾತ್ರಿ 7 ಗಂಟೆ ಸುಮಾರಿಗೆ ಯಾರಿಗೋ ಫೋನ್ ಮಾಡಿ ತಾನು ಸಾಯುತ್ತೇನೆ ಎಂದು ಕೃತಿಕಾ ಸಾಯುವ ಮೊದಲು ಹೇಳುತ್ತಿದ್ದಳು ಎನ್ನಲಾಗಿದೆ.
ರಾತ್ರಿ 7.10ರಿಂದ 7.30ರ ಅವಧಿಯಲ್ಲಿ ವಸತಿ ನಿಲಯದ ತನ್ನ ಕೊಠಡಿಯಲ್ಲಿ ನೇಣು ಬಿಗಿದುಕೊಂಡಿದ್ದ ಸ್ಥಿತಿಯಲ್ಲಿ ಆಕೆಯ ಮೃತದೇಹ ಪತ್ತೆಯಾಗಿದೆ. ಈ ಕುರಿತು ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.