ಬೆಂಗಳೂರು : ಹೆದ್ದಾರಿ ಡಿವೈಡರ್ ಮೇಲೇರಿ 5 ಪಲ್ಟಿ ಹೊಡೆದು ಕಾರು ಪಲ್ಟಿಯಾಗಿದೆ. ಕಾರು ಪಲ್ಟಿಯಾಗುತ್ತಿದ್ದಂತೆ ಮೂವರು ಕಾರಿನಿಂದ ಹೊರಗೆ ಹಾರಿ ಬಿದ್ದಿದ್ದಾರೆ. ಕಾರಿನಲ್ಲಿದ್ದ ಐವರ ಪೈಕಿ 20 ವರ್ಷದ ಯೂನಿಸ್ ಎನ್ನುವ ವ್ಯಕ್ತಿ ಸಾವನಪ್ಪಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಕತ್ತಿ ಹೊಸಹಳ್ಳಿ ಬಳಿ ಈ ಒಂದು ಭೀಕರ ಅಪಘಾತ ಸಂಭವಿಸಿದೆ. ನಿನ್ನೆ ಬೆಳಿಗ್ಗೆ ನಡೆದಂತಹ ಈ ಒಂದು ಕಾರು ಅಪಘಾತ ಧಾರವಾಡದಿಂದ ದೇವನಹಳ್ಳಿಯ ವಿಜಯಪುರಕ್ಕೆ ಐವರು ಬರುತ್ತಿದ್ದರು ಕಾರು ಪಲ್ಟಿಯಾಗಿ ಕಾರಿನಲ್ಲಿದ್ದ ಐವರು ಗಾಯಗೊಂಡಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ಕಾರು ಚಾಲಕ ಯೂನಿಸ್ ಇದೀಗ ಸಾವನ್ನಪ್ಪಿದ್ದಾನೆ.