ಬೆಂಗಳೂರು : ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಟ್ರಕ್ ಗುದ್ದಿ 10 ವರ್ಷದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೆಂಗಲೂರಿನ ಹೆಣ್ಣೂರು ಬಳಿಕ ಕ್ಲಾಸಿಕ್ ಗಾರ್ಡನ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಬೈಕ್ ಗೆ ಹಿಂಬದಿಯಿಂದ ಟ್ರಕ್ ಗುದ್ದಿ ಬಾಲಕನ ಮೇಲೆ ಹರಿದ ಪರಿಣಾಮ 10 ವರ್ಷದ ಬಾಲಕ ಭಾನುತೇಜ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮಾವನಿಗೆ ಗಂಭೀರ ಗಾಯವಾಗಿದೆ.
ಸದ್ಯ ಬಾಲಕನ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.