ಬೆಂಗಳೂರು : ಬೆಂಗಳೂರಲ್ಲಿ ಇತ್ತೀಚಿಗೆ ಹಿಟ್ ಅಂಡ್ ರನ್ ಕೇಸ್ ಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಇದೀಗ ಬೆಂಗಳೂರು ನಗರದ ಹೊರವಲಯದ ಆನೇಕಲ್ ಬಳಿ ಹಿಟ್ ಅಂಡ್ ರನ್ ಕೇಸ್ ಗೆ ಬೈಕ್ ಸಮಾರಂಭ ಬಲಿಯಾಗಿದ್ದು ಘಟನೆ ನಡೆದ ನಂತರ ವಾಹನ ಚಾಲಕ ಅಲ್ಲಿಂದ ಪ್ರಾಣಿಯಾಗಿದ್ದಾನೆ. ಇದೀಗ ಪೊಲೀಸರು ವಾಹನ ಚಾಲಕನಿಗಾಗಿ ಹುಡುಕಾಟ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಆನೇಕಲ್ ಬಳಿ ಹಿಟ್ ಅಂಡ್ ರನ್ ಗೆ ಬೈಕ್ ಸವಾರ ಮೃತಪಟ್ಟಿದ್ದು, ಬೈಕ್ ಗೆ ಡಿಕ್ಕಿ ಹೊಡೆದ ಬಳಿಕ ಚಾಲಕ ಪರಾರಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಬೈಕ್ ಡಿಕ್ಕಿ ರಭಸಕ್ಕೆ ಸವಾರನ ತಲೆಯ ಭಾಗ ಛಿದ್ರ ಛಿದ್ರವಾಗಿದೆ ಎಂದು ಹೇಳಲಾಗುತ್ತಿದೆ.ಅಪಘಾತ ಸ್ಥಳಕ್ಕೆ ಆನೇಕಲ್ ಪೊಲೀಸ್ರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಚಾಲಕನಿಗಾಗಿ ಪೊಲೀಸರಿಂದ ಹುಡುಕಾಟ ನಡೆಸಲಾಗುತ್ತಿದೆ ಈ ಒಂದು ಬಜಾರ್ ರಸ್ತೆಯಲ್ಲಿ ಒಂದೇ ವಾರದಲ್ಲಿ ಎರಡು ಅಪಘಾತ ನಡೆದಿದೆ.
ಬೈಕ್ ಸವಾರನಿಗೆ ಗುದ್ದಿದ ಕೊಲೆ ಬಸವ
ಬೈಕ್ ಸವಾರನೀಗೆ ಕೊಲೆ ಬಸವ ಗುಮ್ಮಿದ ಘಟನೆ ಬೆಂಗಳೂರಿನ ಮಹಾಲಕ್ಷ್ಮಿಲೇಔಟ್ ಹತ್ತಿರ ಸ್ವಿಮ್ಮಿಂಗ್ ಪೂಲ್ ಜಂಕ್ಷನ್ ಹತ್ತಿರ ನಡೆದಿದೆ. ಕೋಲೆ ಬಸವ ಗುಮ್ಮುತ್ತಿದ್ದಂತೆ ಬೈಕ್ ಸವಾರ ಲಾರಿಯ ವಾಹನದ ಕೆಳಗೆ ಬಿದ್ದಿದಾನೆ. ಈ ವೇಳೆ ಲಾರಿಯ ಚಾಲಕ ಬ್ರೇಕ್ ಹಾಕಿದ್ದರಿಂದ ಬೈಕ್ ಉಳಿದಿದ್ದಾನೆ. ವಾಹನದ ಕೆಳಗೆ ಬಿದ್ದ ಬೈಕ್ ಸವಾರ ತಕ್ಷಣ ಬ್ರೇಕ್ ಹಾಕಿದರಿಂದ ಬೈಕ್ ಸವಾರ ಬದುಕುಳಿದಿದ್ದಾನೆ ಎನ್ನಲಾಗುತ್ತಿದೆ. ಮಹಾಲಕ್ಷ್ಮಿ ಲೇಔಟ್ ಸ್ವಿಮ್ಮಿಂಗ್ ಪೂಲ್ ಅ ಜಂಕ್ಷನ್ ಬಳಿ ಈ ಘಟನೆ ಸಂಭವಿಸಿದೆ.