ಬೆಂಗಳೂರು : ಬೆಂಗಳೂರಿನಲ್ಲಿ ಖಾಸಗಿ ಬಸ್ ಗಳ ಅಟ್ಟಹಾಸ ಮುಂದುವರೆದಿದ್ದು ಅನೇಕ ಜನರ ಪ್ರಾಣಕ್ಕೆ ಸಂಚು ತಂದಿವೆ. ಇದೀಗ ಬೆಂಗಳೂರಿನಲ್ಲಿ ಖಾಸಗಿ ಬಸ್ ಹರಿದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಾಗರಬಾವಿ ರಿಂಗ್ ರಸ್ತೆಯ ಮಲೆ ಮಹದೇಶ್ವರ ದೇಗುಲದ ಬಳಿ ನಡೆದಿದೆ.ವೇಗವಾಗಿ ಬಂದು ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ವೇಗವಾಗಿ ಬಂದು ಬೈಕಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದಿದ್ದ ಪರಿಣಾಮ ಈ ವೇಳೆ ಕೆಳಗಡೆ ಬೈಕ್ ಸವಾರ ಕೆಳಗಡೆ ಬಿದ್ದಿದಾನೆ. ಇದೆ ಸಂದರ್ಭದಲ್ಲಿ ಆತನ ತಲೆಯ ಮೇಲೆ ಖಾಸಗಿ ಬಸ್ ಚಕ್ರ ಹರಿದಿದೆ. ಈ ವೇಳೆ ಸವಾರ ಮುರಳಿ (40) ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಬೆಂಗಳೂರಲ್ಲಿ ಫೆ.29ರಿಂದ ಮಾ.9ರವರೆಗೆ ‘ರಾಷ್ಟ್ರೀಯ ಸಾರಸ್’ ಮೇಳ : ಲೋಗೋ ಅನವರಾನಗೊಳಿಸಿದ ಡಿಸಿಎಂ ಡಿಕೆ
ಘಟನೆಗೆ ಸಂಬಂಧಿಸಿದಂತೆ ಇದೀಗ ಖಾಸಗಿ ಬಸ್ ಹಾಗೂ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದ ವಿಚಾರಣೆ ನಡೆಸುತ್ತಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಗೆ ಮೃತ ಮುರಳಿ ಶವವನ್ನು ಸ್ಥಳಾಂತರಿಸಲಾಗಿದೆ ಜ್ಞಾನಭಾರತಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಜಿ ಸಚಿವ ‘ಶ್ರೀ ರಾಮುಲುಗೆ’ ಕೋರ್ಟ್ ತರಾಟೆ : ವಿಚಾರಣೆಗೆ ಹಾಜರಾಗದಿದ್ದರೆ ‘ಬಂಧನದ’ ಆದೇಶ ಎಚ್ಚರಿಕೆ