ಬೆಂಗಳೂರು : ಬೆಂಗಳೂರಿನಲ್ಲಿ ಸೆಲ್ಫ್ ಆಕ್ಸಿಡೆಂಟ್ ಗೆ ಬೈಕ್ ಸವಾರಣೊಬ್ಬ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಹೆಬ್ಬಾಳ ಫ್ಲೈ ಓವರ್ ಬಳಿ ಈ ಒಂದು ಅಪಘಾತ ಸಂಭವಿಸಿದೆ.
ಹೌದು ಬೆಂಗಳೂರಿನಲ್ಲಿ ಮತ್ತೊಂದು ಅಪಘಾತ ಸಂಭವಿಸಿದ್ದು, ಹೆಬ್ಬಾಳ ಫ್ಲೈ ಓವರ್ ಮೇಲೆ ಸ್ಕೂಟರ್ ಅಪಘಾತ ಸಂಭವಿಸಿದೆ. ಸೆಲ್ಫ್ ಆಕ್ಸಿಡೆಂಟ್ ಗೆ ಸ್ಕೂಟರ್ ಸವಾರ ಸಾವನಪ್ಪಿದ್ದಾನೆ. ವೇಗವಾಗಿ ಬಂದ ಸವಾರ ರಸ್ತೆ ಬದಿಯ ಡಿವೈಡರ್ ಗೆ ಡಿಕ್ಕಿ ಹೊಡೆದಿದ್ದಾನೆ. ಘಟನೆ ಕುರಿತು ಹೆಬ್ಬಾಳ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ