ಬೆಂಗಳೂರು : ಬೆಂಗಳೂರಿನಲ್ಲಿ ಖತರ್ನಾಕ್ ಗ್ಯಾಂಗ್ ಅನ್ನು ಪೊಲೀಸರು ಅರೆಸ್ಟ್ ಮಾಡಿದ್ದು, ಬಿಹಾರ್ ಮೂಲದ ಚಾದರ್ ಗ್ಯಾಂಗ್ ಎಂದೆ ಖ್ಯಾತಿ ಪಡೆದಿದ್ದ ಸುಮಾರು 8 ಜನರ ಖದೀಮರ ಗ್ಯಾಂಗನ್ನು ಬೆಂಗಳೂರಿನ ಬೈಯಪ್ಪನಹಳ್ಳಿ ಪೊಲೀಸರು ಇದೀಗ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೌದು ರಾಜಧಾನಿಯಲ್ಲಿ ಬಿಡು ಬಿಟ್ಟಿದ ಚಾದರ್ ಗ್ಯಾಂಗ್ ಅರೆಸ್ಟ್ ಆಗಿದೆ. ಬಿಹಾರ್ ಮೂಲದ ಚಾದರ್ ಗ್ಯಾಂಗ್ ಅನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಸುಮಾರು 8 ಜನರನ್ನು ಬೈಯಪ್ಪನಹಳ್ಳಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ನವೆಂಬರ್ 21ರ ಮುಂಜಾನೆಯೇ ಮೊಬೈಲ್ ಅಂಗಡಿ ಒಂದನ್ನು ಖದೀಮರು ದೋಚಿದ್ದರು.ಬೈಯ್ಯಪನಹಳ್ಳಿಯ ಠಾಣಾ ವ್ಯಾಪ್ತಿಯ ಮೊಬೈಲ್ ಶಾಪ್ ನಲ್ಲಿ ಕಳ್ಳತನ ಮಾಡಿದ್ದರು.
ಸುಮಾರು ಮುಂಜಾನೆ 5ಗಂಟೆಗೆ ಮೊಬೈಲ್ ಶಾಪ್ ಗೆ ನುಗ್ಗಿ 1.50 ಸಾವಿರ ನಗದು ಹಣ, 28 ಲಕ್ಷ ಮೌಲ್ಯದ ಸುಮಾರು 80 ಮೊಬೈಲ್ ಗಳನ್ನು ಸೇರಿದಂತೆ ಅನೇಕ ವಸ್ತುಗಳನ್ನು ಕಳ್ಳತನ ಮಾಡಿದ್ದರು. ಮೊಬೈಲ್ ಶಾಪ್ ಕಳ್ಳತನ ಕುರಿತಂತೆ ಮೊಬೈಲ್ ಮಾಲೀಕರು ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದರು.
ಗ್ಯಾಂಗ್ ನ ಪ್ಲಾನ್ ಹೇಗಿತ್ತು ಗೊತ್ತ?
ಕೆಲ ತಿಂಗಳ ಹಿಂದೆ ಈ ಒಂದು ಬಿಹಾರ್ ಮೂಲದ ಚಾದರ್ ಗ್ಯಾಂಗ್ ಬೆಂಗಳೂರಿಗೆ ಬಂದಿದ್ದು, ಬೇಗೂರು ಬಳಿಯ ಮನೆ ಒಂದರಲ್ಲಿ 9ರಿಂದ 10 ಜನರು ವಾಸವಾಗಿದ್ದರು. ಟಾರ್ಗೆಟ್ ಮಾಡಿ ಅಂಗಡಿಗಳನ್ನು ಎರಡು ಮೂರು ದಿನಗಳ ವರೆಗೆ ಗಮನಿಸುತ್ತಾರೆ.ಅಂಗಡಿಯಲ್ಲಿ ಖರೀದಿ ಮಾಡುವ ನೆಪದಲ್ಲಿ ಸಂಪೂರ್ಣವಾಗಿ ಎಲ್ಲವನ್ನು ವಾಚ್ ಮಾಡುತ್ತಾರೆ. ರಾತ್ರಿಯ ವೇಳೆ ಬೆಡ್ ಶೀಟ್ ಜೊತೆಗೆ ಕಳ್ಳತನಕ್ಕೆ ಇಳಿಯುತ್ತಾರೆ.
ಬ್ಯಾಗ್ ಗಳಲ್ಲಿ ಬೆಡ್ ಶೀಟ್ ಹಾಕಿಕೊಂಡು ರಾತ್ರಿ ವೇಳೆಗೆ ಅಂಗಡಿಗಳಿಗೆ ನುಗ್ಗುತ್ತಾರೆ. ಇಬ್ಬರು ಮೊಬೈಲ್ ಶಾಪ್ ಗೆ ಬೆಡ್ ಶೀಟ್ ಅಡ್ಡಲಾಗಿ ಹಿಡಿದಿಯುತ್ತಾರೆ. ಬಳಿಕ ಮತ್ತಿಬ್ಬರು ಅಂಗಡಿ ಒಳಗಡೆ ಹೋಗಿ ಕಳ್ಳತನ ಮಾಡಿ, ಶಾಪ್ ಕ್ಲೋಸ್ ಮಾಡಿ ಮತ್ತೆ ಸೈಲೆಂಟಾಗಿ ವಾಪಸ್ ಹೋಗುತ್ತಾರೆ. ಇದೇ ರೀತಿ ಬೈಯಪ್ಪನಹಳ್ಳಿಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೊಬೈಲ್ ಅಂಗಡಿ ಒಂದನ್ನು ಕಳ್ಳತನ ಮಾಡಿದ್ದರು.ಇದೀಗ ಬೈಯಪ್ಪನಹಳ್ಳಿ ಠಾಣೆಯ ಪೊಲೀಸರು 8 ಜನರನ್ನು ಅರೆಸ್ಟ್ ಮಾಡಿದ್ದಾರೆ.