ಬೆಂಗಳೂರು : ಬೇಸಿಗೆ ಆರಂಭಕ್ಕೂ ಮುನ್ನ ಬೆಂಗಳೂರು ನಗರದಲ್ಲಿ ಜನರು ನೀರಿಗಾಗಿ ಪರದಾಟ ನಡೆಸುತ್ತಿದ್ದಾರೆ. ಈಗ ನೆಲೆಯಲ್ಲಿ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಬಗೆಹರಿಸುವುದಕ್ಕೆ ಕ್ರಮ ಕೈಗೊಂಡಿದ್ದು ನಾವು ಹಾಗೂ ಬಿ ಡಬ್ಲ್ಯೂ ಎಸ್ ಎಸ್ ಬಿ ಬೋರ್ವೆಲ್ ಗಳನ್ನು ಕೊಡಿಸುತ್ತೇವೆ. ಇದಕ್ಕಾಗಿ 131 ಕೋಟಿ ಮೀಸಲಿಟ್ಟಿದ್ದು, ಪ್ರತಿ ಕ್ಷೇತ್ರಕ್ಕೆ 10 ಕೋಟಿ ಹಣ ಬಿ ಡಬ್ಲ್ಯೂ ಎಸ್ ಎಸ್ ಬಿ ಗೆ ಕೊಡುತ್ತೇವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ ತಿಳಿಸಿದರು.
ರಾಜ್ಯದಲ್ಲಿಯೂ ‘ಬಾಂಬೆ ಮಿಠಾಯಿ’ ನಿಷೇಧ: ಕಾಟನ್ ಕ್ಯಾಂಡಿ ಪರೀಕ್ಷೆಗೆ ಮುಂದಾದ ಸರ್ಕಾರ
ಇಂದಿನ ಸಭೆಯಲ್ಲಿ ಮಾತನಾಡಿದ ಅವರು, ನೀರಿಗಾಗಿ ಒಟ್ಟು 131 ಕೋಟಿ ಹಣವನ್ನು ಮೀಸಲಿಟ್ಟಿದ್ದೇವೆ. 110 ಹಳ್ಳಿಗಳಿಗೆ 40 ಸಾವಿರ ಕನೆಕ್ಷನ್ ಕೊಟ್ಟಿದ್ದೇವೆ.ಕಾವೇರಿ 5ನೇ ಹಂತ ಬರುವವರೆಗೂ ವಲಯ ಆಯುಕ್ತರು ಹಾಗೂ BWSSB ಅಧಿಕಾರಿಗಳು ನಿರ್ವಹಣೆಯನ್ನು ಮಾಡುತ್ತಾರೆ.110 ಹಳ್ಳಿಗಳ ನೀರಿನ ಬಿಬಿಎಂಪಿ ಮಾಡುತ್ತದೆ. ನಗರ ವ್ಯಾಪ್ತಿಯಲ್ಲಿ BWSSB ಅಧಿಕಾರಿಗಳು ನಿರ್ವಹಿಸುತ್ತಾರೆ. ಹಣಕೊಟ್ಟು ಖಾಸಗಿ ಟ್ಯಾಂಕರ್ ಗಳನ್ನು ಕೂಡ ಖರೀದಿಸುತ್ತೇವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ ತಿಳಿಸಿದರು.
ಲೋಕಸಭಾ ಚುನಾವಣೆ: ‘ಎಎಪಿ-ಕಾಂಗ್ರೆಸ್’ ನಡುವೆ ಮೈತ್ರಿ, ‘ಸೀಟು ಹಂಚಿಕೆ’ ಫೈನಲ್ | Lok Sabha Polls
ಖಾಸಗಿ ಟ್ಯಾಂಕರ್ ಗಳಿಗೆ ಯಾವುದೇ ರೀತಿಯಾದಂತಹ ದರವನ್ನು ನಿಗದಿ ಮಾಡಿಲ್ಲ. ಖಾಸಗಿ ನೀರಿನ ಟ್ಯಾಂಕರ್ ಗಳನ್ನು ನಾವೇ ತೆಗೆದುಕೊಳ್ಳುತ್ತೇವೆ ಖಾಸಗಿ ನೀರಿನ ಟ್ಯಾಂಕರ್ ಗಳಿಗೆ ನಾವೇ ದರ ನಿಗದಿ ಮಾಡುತ್ತೇವೆ ಆದರವನ್ನು ಖಾಸಗಿ ಟ್ಯಾಂಕರ್ ಮಾಲಿಕರಿಗೆ ನೀಡುತ್ತೇವೆ ಎಂದು ಅವರು ತಿಳಿಸಿದರು.
ರಾಜ್ಯ ಸರ್ಕಾರದ ‘ಗೃಹಲಕ್ಷ್ಮಿ’ ಯೋಜನೆಯನ್ನ ತಿರಸ್ಕರಿಸಿದ ಈ ಜಿಲ್ಲೆಯ 900ಕ್ಕೂ ಹೆಚ್ಚು ‘ಯಜಮಾನಿಯರು’
ಬೇಸಿಗೆಗು ಮುನ್ನ ಬೆಂಗಳೂರಲ್ಲಿ ಜಲ ದಾಹ ಉಂಟಾಗಿದೆ. ನಲ್ಲಿ ನೀರು ಬರುತ್ತಿಲ್ಲ ಟ್ಯಾಂಕರ್ ನೀರು ಸಿಗುತ್ತಿಲ್ಲ ದಿನನಿತ್ಯ ಬಳಕೆಗು ನೀರಿಲ್ಲದೆ ನಿವಾಸಿಗಳು ಕಂಗಾಲಾಗಿದ್ದಾರೆ ನೀರಿನ ಸಮಸ್ಯೆ ಹೇಗೆ ಸೇರಿದ ಪಾಲಿಕೆ ವಿರುದ್ಧ ಜನರು ಅಕ್ರೋಶ ಹೊರಹಾಕುತ್ತಿದ್ದಾರೆ ನೀರಿಲ್ಲಿದ್ದಕ್ಕೆ ಮನೆಯನ್ನು ಬಾಡಿಗೆದಾರರು ತರೆಯುತ್ತಿದ್ದಾರೆ ಇದೇ ವೇಳೆ ನೀರಿನ ಸಂಕಷ್ಟದಿಂದ ಮನೆ ಮಾಲೀಕರು ಕೂಡ ಕಂಗಾಲಾಗಿದ್ದಾರೆ. ಇದೀಗ ಬಿಬಿಎಂಪಿ ನೀರಿನ ಬವಣೆ ನೀಗಿಸಲು 131 ಕೋಟಿ ಮೀಸಲಿಟ್ಟಿದೆ.