ಮಡಿಕೇರಿ : ಬೆಂಗಳೂರು ಮೂಲದ ಐಟಿ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿ ಮಡಿಕೇರಿಯ ಲಾಡ್ಜ್ ನಲ್ಲಿ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.
ಮೂರು ದಿನಗಳ ಹಿಂದೆ ಸಂದೇಶ ಎನ್ನುವ ವ್ಯಕ್ತಿ ಮಡಿಕೇರಿಗೆ ಆಗಮಿಸಿದ್ದ ಎನ್ನಲಾಗಿದೆ. ಬೆಂಗಳೂರಿನಲ್ಲಿ ಸಂದೇಶ ಐಟಿ ಕೆಲಸವನ್ನು ಮಾಡುತ್ತಿದ್ದ ಮಡಿಕೇರಿ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಬ್ಯಾಂಕಿಗೆ ರೈತರ ಮುತ್ತಿಗೆ
ಕಾನೂನು ಬಾಹಿರವಾಗಿ ರೈತನ ಮನೆ ಹರಾಜು ಆರೋಪದ ಹಿನ್ನೆಲೆಯಲ್ಲಿ ಮೈಸೂರಿನ ವಿಜಯನಗರದ ಪ್ರಧಾನ ಕಚೇರಿಗೆ ಮುತ್ತಿಗೆ ಹಾಕಲಾಗಿದೆ. ಕರ್ನಾಟಕ ರಾಜ್ಯ ರೈತ ಸಂಘದ ರೈತರಿಂದ ಪ್ರತಿಭಟನೆ ರೈತ ದೊರೆಸ್ವಾಮಿ ಮನೆ ಹರಾಜು ಹಾಕಿರುವ ಆರೋಪ ಕೇಳಿ ಬಂದಿದೆ.
ರೈತ ದೊರೆಸ್ವಾಮಿ ಬ್ಯಾಂಕ್ನಿಂದ 15 ಲಕ್ಷ ಸಾಲವನ್ನು ಪಡೆದಿದ್ದರು ಎಂದು ಹೇಳಲಾಗುತ್ತಿದ್ದು, ಬಡ್ಡಿ ಸಮೇತ 18 ಲಕ್ಷ 98 ಸಾವಿರ ರೂಪಾಯಿಯನ್ನು ದೊರೆಸ್ವಾಮಿ ತೀರಿಸಿದ್ದರು. ಆದರೂ ಕೂಡ ಮನೆ ಹರಾಜು ಹಾಕಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.ಅದರಿಂದ ವಿಜಯನಗರದ ಬ್ಯಾಂಕಿನ ಪ್ರಧಾನ ಕಚೇರಿಗೆ ರೈತ ಸಂಘಟನೆ ಮುತ್ತಿಗೆ ಹಾಕಿವೆ.