ಬೆಂಗಳೂರು : ನಿನ್ನೆ ತಾನೆ ಬೆಂಗಳೂರಿನಲ್ಲಿ ಸಾಲದಿಂದಾಗಿ ಟೆಕ್ಕಿ ದಂಪತಿಗಳು ತಮ್ಮ ಇಬ್ಬರೂ ಮಕ್ಕಳಿಗೆ ವಿಷ ಹಾಕಿ ಕೊಂದು, ತಾವು ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಈ ಘಟನೆ ಮಾಸುವ ಮುನ್ನವೇ ಇದೀಗ ಬೆಂಗಳೂರಿನಲ್ಲಿ ಸಾಲದಿಂದ ಬಡ್ಡಿ ಟಾರ್ಚರ್ಗೆ ಬೇಸತ್ತು, ಉದ್ಯಮಿಯೊಬ್ಬರು ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರಿನ ಅಕ್ಷಯ ನಗರದಲ್ಲಿ ನಡೆದಿದೆ.
ಹೌದು ಬೆಂಗಳೂರಿನಲ್ಲಿ ಸಾಲದಿಂದ ಬೇಸತ್ತು ಉದ್ಯಮಿ ನೇಣಿಗೆ ಶರಣಾಗಿದ್ದಾರೆ. ಹುಳಿಮಾವು ಠಾಣಾ ವ್ಯಾಪ್ತಿಯ ಅಕ್ಷಯ ನಗರದಲ್ಲಿ ಈ ಒಂದು ಘಟನೆ ನಡೆದಿದೆ. ಮನೆಯಲ್ಲಿ ನೇಣು ಬಿಗಿದುಕೊಂಡು ಕಲಾಲ್ ದತ್ತ (40) ಆತ್ಮಹತ್ಯೆಗೆ ಶರಣಾಗಿರುವ ವ್ಯಕ್ತಿ ಎಂದು ತಿಳಿದುಬಂದಿದೆ.
ಸಾಲಕ್ಕೆ ಬಡ್ಡಿ ನೀಡುವ ಟಾರ್ಚರ್ಗೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಇದೀಗ ಆರೋಪ ಕೇಳಿ ಬಂದಿದೆ.ನಿನ್ನೆ ಸಂಜೆ ಉದ್ಯಮಿ ಕಲಾಲ್ ದತ್ತ ನೇಣಿಗೆ ಶರಣಾಗಿದ್ದಾರೆ. ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.