ಬೆಂಗಳೂರು : ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧೆಡೆ ಮತ್ತೆ ಬೈಕ್ ವ್ಹೀಲಿಂಗ್ ಹಾವಳಿ ಹೆಚ್ಚಾಗಿದೆ. ಹೆದ್ದಾರಿಯಲ್ಲಿ ವ್ಹೀಲಿಂಗ್ ಮಾಡುತ್ತಾ ಸಾರ್ವಜನಿಕರಿಗೆ ಸಮಸ್ಯೆ ನೀಡುತ್ತ ಪುಂಡಾಟ ಮೆರೆಯುತ್ತಿದ್ದ 6 ಜನರನ್ನು ಪೊಲೀಸರು ಹೆಡೆಮುರಿಕಟ್ಟಿದ್ದಾರೆ.
ಬಿಜೆಪಿ-ಜೆಡಿಎಸ್ ಪಕ್ಷಗಳದ್ದು ‘ಅಪವಿತ್ರ ಮೈತ್ರಿ’ : ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ
ರಾಷ್ಟ್ರೀಯ ಹೆದ್ದಾರಿಯಲ್ಲಿ ವ್ಹೀಲಿಂಗ್ ಮಾಡಿ ಹೆಚ್ಚಾಟ ಮೆರೆಯುತ್ತಿದ್ದ 6 ಜನರನ್ನು ನೆಲಮಂಗಲ ಪೊಲೀಸರು ಬಂಧಿಸಿದ್ದಾರೆ.ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನಲ್ಲಿ ಈ ಘಟನೆ ನಡೆದಿದೆ.
ಯುರೋಪಿಯನ್ ‘ಫ್ರೀ ಟ್ರೇಡ್ ಅಸೋಸಿಯೇಷನ್’ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಭಾರತ
ಇತ್ತೀಚಿಗೆ ಸಂಚಾರಿ ಪೊಲೀಸ್ ಠಾಣೆಯ ಅಧಿಕಾರಿಗಳು ವೀಲಿಂಗ್ ಮಾಡುವ ಪುಂಡರಿಗೆ ಒಮ್ಮೆ ಎಚ್ಚರಿಕೆಯನ್ನು ಸಹ ನೀಡಿದರು ಅಲ್ಲದೆ ಠಾಣೆಗೆ ಕರೆಯಿಸಿ ವೀಲಿಂಗ್ ಮಾಡುವ ಪುಂಡರ ಪೋಷಕರಿಗೂ ಕೂಡ ಎಚ್ಚರಿಕೆ ನೀಡಿ ಕಳಿಸಿದ್ದರು ಆದರೂ ಕೂಡ ಬೆಂಗಳೂರಿನಲ್ಲಿ ಪದೇಪದೇ ಇಂತಹ ಘಟನೆಗಳು ನಡೆಯುತ್ತಲೇ ಇವೆ.
BREAKING :ಬೆಂಗಳೂರಲ್ಲಿ ‘ಬೋರ್ವೆಲ್’ ಕೊರೆಯೋಕೆ ಅನುಮತಿ ಕಡ್ಡಾಯ: ಮಾ.15ರ ನಿಯಮ ಜಾರಿ ಮಾಡಿ ಜಲಮಂಡಳಿ ಆದೇಶ
ನೆಲಮಂಗಲ ಸಂಚಾರಿ ಪೊಲೀಸರು 13 ಬೈಕ್ ಗಳನ್ನು ಜಪ್ತಿ ಮಾಡಿದ್ದಾರೆ. ಶಿವರಾತ್ರಿ ಸೇರಿದಂತೆ ಇತರೆ ಹಬ್ಬಗಳ ಸಂದರ್ಭಗಳಲ್ಲಿ ಅಪಾಯಕಾರಿ ವ್ಹೀಲಿಂಗ್ ಮಾಡಿ ಇತರ ವಾಹನಸವಾರರಿಗೂ ತೊಂದರೆ ಕೊಡುತ್ತಿದ್ದರು. ಆರಂಭದಲ್ಲಿ ವ್ಹೀಲಿಂಗ್ ದೃಶ್ಯ ಸೆರೆ ಹಿಡಿದ ಪೊಲಿಸರು ಬಳಿಕ ಆರು ಜನರನ್ನು ಬಂಧಿಸಿದ್ದರೆ.