ಬೆಂಗಳೂರು : ಬೆಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಾಸಕ ಸತೀಶ್ ಸೈಲ್ ಗೆ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಸೇರಿದಂತೆ ಒಟ್ಟು 6 ಪ್ರಕರಣಗಳಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಸೇರಿದಂತೆ ಇತರೆ ಆರೋಪಿಗಳಿಗೆ ಶಿಕ್ಷೆ ಪ್ರಕಟಿಸಿದೆ. ಅಲ್ಲದೆ 6 ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಟ್ಟು 44 ಕೋಟಿಗೂ ಅಧಿಕ ದಂಡ ವಿಧಿಸಿದೆ.
ಒಟ್ಟು 6 ಪ್ರಕರಣಗಳಲ್ಲಿ ಶಿಕ್ಷೆ ನೀಡಿರುವ ನ್ಯಾಯಲಯ ಅದರಂತೆ ಪ್ರತಿಯೊಂದು ಶಿಕ್ಷೆಗೂ ಕೂಡ ದಂಡ ವಿಧಿಸಿದೆ. ಒಳಸಂಚು ಆರೋಪದ ಅಡಿ 5 ವರ್ಷ ಜೈಲು ಶಿಕ್ಷೆ, ವಂಚನೆ ಕೇಸ್ ನಲ್ಲಿ 7 ವರ್ಷ ಕಠಿಣ ಶಿಕ್ಷೆ, ಕಳ್ಳತನ ಪ್ರಕರಣದಲ್ಲಿ 3 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಇನ್ನು 4,5 ಹಾಗೂ 6ನೇ ಕೇಸ್ ನಲ್ಲಿ ಕೂಡ ಶಿಕ್ಷೆ ವಿಧಿಸಿದೆ. ಎಲ್ಲ ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಟ್ಟು 44 ಕೋಟಿ ದಂಡ ವಿಧಿಸಿದ ಕೋರ್ಟ್ ದಂಡದ ಮೊತ್ತವನ್ನು ಸರ್ಕಾರಕ್ಕೆ ಜಪ್ತಿ ಮಾಡಿಕೊಳ್ಳಲು ಆದೇಶ ನೀಡಿದೆ.
ಮೊದಲ ಪ್ರಕರಣದಲ್ಲಿ 6 ಕೋಟಿ ರೂಪಾಯಿ ದಂಡ, ಎರಡನೇ ಪ್ರಕರಣದಲ್ಲಿ 9.60 ಕೋಟಿ ರೂಪಾಯಿ ದಂಡ, ಮೂರನೇ ಪ್ರಕರಣದಲ್ಲಿ 9.36, ಕೋಟಿ ರೂಪಾಯಿ ದಂಡ, ನಾಲ್ಕನೇ ಪ್ರಕರಣದಲ್ಲಿ 9.54 ಕೋಟಿ ರೂಪಾಯಿ ದಂಡ, ಐದನೇ ಪ್ರಕರಣದಲ್ಲಿ 9.25 ಕೋಟಿ ರೂಪಾಯಿ ದಂಡ ಹಾಗೂ ಆರನೇ ಪ್ರಕರಣದಲ್ಲಿ 90 ಲಕ್ಷ ರೂಪಾಯಿ ದಂಡ ವಿಧಿಸಿ ಕೋರ್ಟ್ ಆದೇಶಿಸಿದೆ.