ಬೆಳಗಾವಿ : ಬೆಳಗಾವಿಯಲ್ಲಿ ಘೋರವಾದ ಘಟನೆ ನಡೆದಿದ್ದು, ಯುವಕನಿಗೆ ಮೊಬೈಲ್ ಗೀಳು ಇತ್ತು. ಇದರಿಂದ ಆತನ ತಂದೆ ಕಾಲೇಜಿಗೆ ಹೋಗು ಅಂತಾ ಹೇಳಿದ್ದಕ್ಕೆ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನಲ್ಲಿ ನಡೆದಿದೆ.
ಮೃತ ಯುವಕನನ್ನು ಸಾಗರ್ ತುಕಾರಾಂ ಕುರಾಡೆ (20) ಎಂದು ತಿಳಿದುಬಂದಿದೆ. ಸಾಗರ್ ಸದಲಗಾ ಸರ್ಕಾರಿ ಪ್ರಥಮ ವರ್ಷ ಬಿಎ ವ್ಯಾಸಂಗ ಮಾಡುತ್ತಿದ್ದ. ಮೊಬೈಲ್ ಗೀಳು ಹೆಚ್ಚಿತ್ತು. ಯಾವಾಗಲೂ ಮನೆಯಲ್ಲಿ ಮೊಬೈಲ್ ನಲ್ಲೇ ಮುಳುಗಿಹೋಗಿದ್ದ.ಕಾಲೇಜಿಗೆ ಹೋಗು ಅಂದರೆ ಕೇಳದೇ ಮೊಬೈಲ್ ನೋಡುತ್ತಿದ್ದ ಎನ್ನಲಾಗಿದೆ.
ಹೀಗಾಗಿ ಕಾಲೇಜಿಗೆ ಹೋಗುವಂತೆ ಪೋಷಕರು ಪದೇ ಪದೇ ಒತ್ತಡ ಹೇರುತ್ತಿದ್ದರಿಂದ ನಗ್ರಾಲ್ ಗ್ರಾಮದ ತನ್ನ ಮನೆಯ ಮುಂದಿರುವ ಹಳೆಯ ಮನೆಯಲ್ಲಿ ಸಾಗರ್ ನೇಣಿಗೆ ಕೊರಳೊಡ್ಡಿದ್ದಾನೆ. ಸಾಗರ್ ಅವರ ತಂದೆ ಚಿಕ್ಕೋಡಿಯ ಸಿ.ಬಿ.ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಇವರು ತಂದೆ ತಾಯಿ ಹಾಗೂ ಕಿರಿಯ ಸಹೋದರನನ್ನು ಅಗಲಿದ್ದಾರೆ