ಬೆಳಗಾವಿ : ಕಳೆದ ಮೇ 1 ರಂದು ಅಥಣಿ ತಾಲೂಕಿನ ಹೊರವಲಯದಲ್ಲಿ ಚರಂಡಿಯಲ್ಲಿ ಬಾಲಕನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಖಾಲಿ ನಿವೇಶನದಲ್ಲಿ ದೊರೆತ ಬಾಲಕನ ಶವಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ. ಕಳ್ಳತನಕ್ಕೆ ಬಂದಿದ್ದಾನೆ ಎಂದು ಕಿರಾತಕರು ಬಾಲಕನನ್ನು ಕೊಂದು ಹಾಕಿದ್ದಾರೆ ಎಂದು ತನಿಖೆಯ ವೇಳೆ ತಿಳಿದುಬಂದಿದೆ.
ಬೆಳಗಾವಿ ಜಿಲ್ಲೆಯ ಅಥಣಿ ಹೊರವಲಯದಲ್ಲಿ ಬಾಲಕನ ಶವ ಸಿಕ್ಕಿತ್ತು. ಮೇ 1ರಂದು ಕೊಳೆತ ಸ್ಥಿತಿಯಲ್ಲಿ ಬಾಲಕನ ಶವ ಪತ್ತೆಯಾಗಿತ್ತು. ಕೊಲೆ ಪ್ರಕರಣವನ್ನು ಮುಚ್ಚಿ ಹಾಕಲು ಪಾಪಿಗಳು ಆಸಿಡ್ ಬಳಕೆ ಮಾಡಿದ್ದಾರೆ. ಅನಾಥ ಶವ ಎಂದು ಪೊಲೀಸರೇ ಬಾಲಕನ ಶವ ಸಂಸ್ಕಾರ ನೆರವೇರಿಸಿದ್ದಾರೆ. ಶವ ಸಂಸ್ಕಾರ ನಡೆದ ಎರಡು ದಿನಗಳ ಬಳಿಕ ಬಾಲಕನ ಗುರುತು ಪತ್ತೆಯಾಗಿದೆ.
ವಿಕಾಸ್ ಶಿವದಾಸ್ ಕೊಷ್ಠಿ (16) ಕೊಲೆಯಾದ ಬಾಲಕ ಎನ್ನಲಾಗಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅರಳಿಹಟ್ಟಿ ಗ್ರಾಮದ ವಿಕಾಸ್ ಎಂದು ತಿಳಿದುಬಂದಿದೆ. ಕಾಳೆ ಫರ್ನಿಚರ್ಸ್ ನಲ್ಲಿ ಕಳ್ಳತನ ಮಾಡಲು ಬಂದಿದ್ದಾನೆ ಎಂದು ರಾತ್ರಿ ಶೆಡ್ ನಲ್ಲಿ ಕಟ್ಟಿಹಾಕಿ ಬಾಲಕನ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದರು. ಕೃತ್ಯ ಮುಚ್ಚಿ ಹಾಕಲು ಶವವನ್ನು ಚರಂಡಿಗೆ ಬಿಸಾಕಿ ಆಸಿಡ್ ಹಾಕಿದ್ದರು. ಕೃತದಲ್ಲಿ ಭಾಗಿಯಾಗಿದ್ದ ಆರು ಜನರನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ.