ಬೆಳಗಾವಿ : ತನ್ನ ಅನೈತಿಕ ಸಂಬಂಧಕ್ಕೆ ಪತಿ ಅಡ್ಡಿ ಆಗುತ್ತಾನೆ ಎಂದು ಪಾಪಿ ಪತ್ನಿ ಒಬ್ಬಳು ತನ್ನ ಗಂಡನ ಹತ್ಯೆಗೆ ಸುಪಾರಿ ನೀಡಿದ್ದು ಅಲ್ಲದೆ, ತನ್ನ ಗಂಡ ಕೊಲೆ ಆಗುತ್ತಿರುವುದನ್ನು ಮೊಬೈಲ್ ನಲ್ಲಿ ವಿಡಿಯೋ ಕಾಲ್ ಮೂಲಕ ನೋಡಿ ವಿಕೃತಿ ಮೆರೆದಿರುವ ಪತ್ನಿಯನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ ಈ ಒಂದು ಘಟನೆ ಎರಡರಂದು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಗಾಡಿಕೊಪ್ಪದಲ್ಲಿ ನಡೆದಿತ್ತು.
ಹೌದು ಗಂಡನ ಕೊಲೆಗೆ ಸುಪಾರಿ ಕೊಟ್ಟಂತಹ ಪತ್ನಿ ಶೈಲಾ ಅರೆಸ್ಟ್ ಆಗಿದ್ದಾಳೆ. ಬೆಳಗಾವಿ ಜಿಲ್ಲೆಯ ಖಾನಾಪುರದ ಗಾಡಿಕೊಪ್ಪದಲ್ಲಿ ಈ ಒಂದು ಭೀಕರ ಕೊಲೆ ನಡೆದಿತ್ತು. ಏಪ್ರಿಲ್ 2 ರಂದು ಶಿವನಗೌಡ ಪಾಟೀಲ್ ಎನ್ನುವ ವ್ಯಕ್ತಿಯ ಬರ್ಬರ ಹತ್ಯೆ ಆಗಿತ್ತು. ಶಿವನಗೌಡನ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು.ರುದ್ರಪ್ಪ ಹೊಸೆಟ್ಟಿ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ.
ಇದೀಗ ಪೊಲೀಸರು ಪ್ರಕರಣವನ್ನು ಬೇಧಿಸಿದ್ದು, ತನಿಖೆ ವೇಳೆ ಶಿವನಗೌಡ ಕೊಲೆಯ ಹತ್ಯೆ ಬಯಲಾಗಿದೆ.ಪತಿಯ ಕೊಲೆಯಾದ ಬಳಿಕ ಏಪ್ರಿಲ್ 3ರಂದು ಪತ್ನಿ ಶೈಲಾ ಕಣ್ಣೀರಿಟ್ಟಿದ್ದಳು. ಆದರೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದಾಗ ಪತ್ನಿಯ ಈ ಒಂದು ಕೃತ್ಯ ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಮೃತ ಶಿವನಗೌಡನ ಪತ್ನಿ ಶೈಲ ಹಾಗೂ ಆರೋಪಿ ರುದ್ರಪ್ಪನನ್ನು ಅರೆಸ್ಟ್ ಮಾಡಿದ್ದಾರೆ.
ಪತಿಯ ಹತ್ಯೆಯ ಕೃತ್ಯ ವಿಡಿಯೋ ಕಾಲ್ ನಲ್ಲಿ ನೋಡಿದ ಶೈಲಾ
ಎರಡು ವರ್ಷಗಳಿಂದ ರುದ್ರಪ್ಪನ ಜೊತೆಗೆ ಶೈಲಾ ಅನೈತಿಕ ಸಂಬಂಧ ಹೊಂದಿದ್ದಳು. ಆರು ತಿಂಗಳ ಹಿಂದೆ ಈ ವಿಷಯ ಬೆಳಕಿಗೆ ಬಂದಿದ್ದು, ಇದರಿಂದ ಪತಿ ಶಿವನಗೌಡ ಆತನ ಸಹವಾಸ ಬಿಡು ಎಂದು ಬುದ್ಧಿ ಹೇಳಿದ್ದ. ಈ ವೇಳೆ ರುದ್ರಪ್ಪ ಹೊಸೆಟ್ಟಿ ಶಿವನಗೌಡನನ್ನು ಕೊಂದಿದ್ದ. ತವರು ಮನೆಯಲ್ಲಿ ಪತ್ನಿಯನ್ನು ಬಿಟ್ಟು ಶಿವನಗೌಡ ವಾಪಾಸ್ ಬರುತ್ತಿದ್ದ. ಇದೆ ಸಂದರ್ಭದಲ್ಲಿ ರುದ್ರಪ್ಪ ಆತನಿಗೆ ಕರೆ ಮಾಡಿ ಪಾರ್ಟಿ ಮಾಡಲು ಕರೆಸಿಕೊಂಡಿದ್ದ. ಆತನಿಗೆ ಮದ್ಯ ಕುಡಿಸಿ ಬಳಿಕ ಶಿವನಗೌಡನನ್ನು ರುದ್ರಪ್ಪ ಹೊಸಟ್ಟಿ ಕೊಲೆ ಮಾಡಿದ್ದಾನೆ.
ಈ ವೇಳೆ ಪತಿಯ ಹತ್ಯೆಯ ಕೃತ್ಯವನ್ನು ಪತ್ನಿ ಶೈಲಾ ಪಾಟೀಲ್ ವಿಡಿಯೋ ಕಾಲ್ ನಲ್ಲಿ ನೋಡಿದ್ದಾಳೆ. ಅಲ್ಲದೆ ಪತಿ ಶಿವನಗೌಡ ಕೊಲೆಯ ದಿನ ಪತ್ನಿ ಶೀಲಾ ಕಣ್ಣೀರಿಟ್ಟು ನಾಟಕ ವಾಡಿದಳು. ಗೋಡಾಡಿ ಕಣ್ಣೀರಿಟ್ಟು ಪ್ರಕರಣವನ್ನು ಡೈವರ್ಟ್ ಮಾಡಿದ್ದಳು. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದ್ದರು. ಸಂಶಯ ಬಂದು ಶೈಲಾ ಮೊಬೈಲ್ ಕಾಲ್ ಹಿಸ್ಟರಿ ಚೆಕ್ ಮಾಡಿದಾಗ ಈ ಒಂದು ಸುಪಾರಿ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿ ಶೈಲಾ ಪಾಟೀಲ್ ಳನ್ನು ಖಾನಾಪುರ ಪೊಲೀಸರು ಬಂಧಿಸಿ ಇದೀಗ ಜೈಲಿಗೆ ಅಟ್ಟಿದ್ದಾರೆ.