ಬೆಳಗಾವಿ : ಇಂದು ದೇಶದಾದ್ಯಂತ ಸಂಕ್ರಾಂತಿ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದ ಆಚರಿಸಲಾಗುತ್ತಿದ್ದು, ಇತ್ತ ಬೆಳಗಾವಿಯಲ್ಲಿ ಸಂಕ್ರಾಂತಿ ಹಬ್ಬದಂದೆ ಭೀಕರವಾದ ಕೊಲೆ ನಡೆದಿದೆ ಎಳ್ಳು ಬೆಲ್ಲ ಕೊಡಲು ಬಂದಿದ್ದ ಅತ್ತೆಯನ್ನೇ ಚಾಕುವಿನಿಂದ ಇರುವುದು ಅಳಿಯನೊಬ್ಬ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ನಗರದ ಖಾಸಬಾಗದಲ್ಲಿ ನಡೆದಿದೆ.
ಹೌದು ಬೆಳಗಾವಿ ನಗರದ ಖಾಸಬಾಗ್ನಲ್ಲಿ ಈ ಒಂದು ಭೀಕರ ಕೊಲೆ ನಡೆದಿದೆ. ಕುಡಿದ ಮತ್ತಿನಲ್ಲಿ ಅತ್ತೆ ರೇಣುಕಾ (40)ಳನ್ನು ಅಳಿಯ ಶುಭಂ ಬಿರ್ಜೆ ಕೊಲೆ ಮಾಡಿದ್ದಾನೆ. ಪತ್ನಿಯ ಚಿಕಿತ್ಸೆ ಖರ್ಚಿಗೆ ಹಣ ನೀಡುವಂತೆ ಶುಭಂ ಬಿರ್ಜೆ ಅತ್ತೆಗೆ ಆಗಾಗ ಪೀಡಿಸುತ್ತಿದ್ದ. ಇಂದು ಸಂಕ್ರಾಂತಿ ಹಬ್ಬದ ನಿಮಿತ್ಯ ಎಳ್ಳು ಬೆಲ್ಲ ಕೊಡಲು ಬಂದಿದ್ದಾಗ ಅತ್ತೆ ಬಳಿ ಅಳಿಯ ಶುಭಂ ಹಣ ಕೇಳಿದ್ದಾನೆ.
ಈ ವೇಳೆ ಹಣ ಕೊಡಲ್ಲ ಎಂದಿದ್ದಕ್ಕೆ ಚಾಕುವಿನಿಂದ ಇರಿದು ರೇಣುಕಾ ಗಳನ್ನು ಭೀಕರವಾಗಿಶುಭಂ ಕೊಲೆ ಮಾಡಿದ್ದಾನೆ. ಹಬ್ಬದಂದು ಭೀಕರ ಕೊಲೆ ನೋಡಿ ಸ್ಥಳೀಯ ಜನರು ಬೆಚ್ಚಿಬಿದ್ದಿದ್ದಾರೆ. ಘಟನೆ ಕುರಿತು ಬೆಳಗಾವಿಯ ಶಹಪುರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.