ಬೆಳಗಾವಿ : ಕೊನೆಗೂ ಬೆಳಗಾವಿ ಪಾಲಿಕೆಯ ಮೇಯರ್ ಹಾಗು ಉಪಮೇಯರ್ ಚುನಾವಣೆಗೆ ಮೂಹೂರ್ಥ ಕೂಡಿ ಬಂದಿದ್ದು, ಇದೆ ಮಾರ್ಚ್ 15 ರಂದು ಪಾಲಿಕೆಯ ಮೇಯರ್ ಹಾಗು ಉಪಮೇಯರ್ ಚುನಾವಣೆ ನಡೆಯಲಿದೆ ಎಂದು ತಿಳಿದುಬಂದಿದೆ.
ಹೌದು ಬೆಳಗಾವಿಯ ಪಾಲಿಕೆ ಮೇಯರ್ ಉಪಮೇಯರ್ ಚುನಾವಣೆಗೆ ಮೂಹೂರ್ಥ ಫಿಕ್ಸ್ ಆಗಿದ್ದು, ಮಾರ್ಚ್ 15 ರಂದು ಚುನಾವಣೆ ನಡೆಯಲಿದೆ. ಸಮಯಕ್ಕೆ ಚುನಾವಣೆ ನಡೆಯಲಿದೆ ಒಂದು ಬೆಳಗ್ಗೆ 9ರಿಂದ 11 ಗಂಟೆಯವರೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಲಿದೆ. ಮೇಯರ್ ಸ್ಥಾನಕ್ಕೆ ಸಾಮಾನ್ಯ ಪುರುಷ, ಉಪಮೇಯರ್ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಚುನಾವಣೆ ನಡೆಯಲಿದೆ.
ಈ ಒಂದು ಚುನಾವಣೆ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಶಾಸಕ ಅಭಯ್ ಪಾಟೀಲ್ ಗೆ ಪ್ರತಿಷ್ಠೆಯ ಚುನಾವಣೆಯಾಗಿದೆ. ಇಬ್ಬರೂ ಸದಸ್ಯರು ಅಮಾನತು ಆದರೂ ಕೂಡ ಬಿಜೆಪಿಗೆ ಸ್ಪಷ್ಟವಾದ ಬಹುಮತ ಇದೆ ಹಾಗಾಗಿ ಈ ಚುನಾವಣೆ ಇಬ್ಬರಿಗೂ ಪ್ರತಿಷ್ಠೆಯ ಚುನಾವಣೆ ಆಗಿದೆ.