ಬೆಳಗಾವಿ : ಪ್ರೀತಿ ಮಾಡಿದ ಜೋಡಿಗಳಿಗೆ ಮದುವೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಯುವಕನೊಬ್ಬ, ಪ್ರಿಯತಮೆಯ ತಾಯಿ ಹಾಗೂ ಮಗನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಅಕ್ಕೋಳ ಗ್ರಾಮದಲ್ಲಿ ಈ ಒಂದು ಬರ್ಬರ ಕೊಲೆ ನಡೆದಿದೆ.
ಹೌದು ಮನೆಗೆ ನುಗ್ಗಿ ಮಾರಕಾಸ್ತ್ರದಿಂದ ಕೊಚ್ಚಿ ತಾಯಿ ಮಗನ ಭೀಕರ ಕೊಲೆಯಾಗಿದ್ದು, ಮಂಗಲಾ ನಾಯಕ (45) ಪುತ್ರ ಪ್ರಜ್ವಲ್ ನಾಯಕ್ (18)ಕೊಲೆಯಾದ ಮೃತ ದುರ್ದೈವಿಗಳು ಎಂದು ತಿಳಿದುಬಂದಿದೆ. ಮಂಗಲಾ ಪುತ್ರಿ ಪ್ರಾಜಕ್ತಾ ಮತ್ತು ಆರೋಪಿ ರವಿ ಪ್ರೀತಿಸುತ್ತಿದ್ದರು. ಪ್ರಾಜಕ್ತಾ ರವಿ ಲವ್ ಮ್ಯಾರೇಜ್ ಗೆ ತಾಯಿ ಮಂಗಲ ವಿರೋಧಿಸಿದ್ದರು.
ಈ ಹಿನ್ನೆಲೆ ಸಿಟ್ಟಿಗೆದ್ದ ರವಿ ಮದುವೆಗೆ ನಿರಾಕರಿಸಿದ್ದಕ್ಕೆ ಮಗಳ ಪ್ರಿಯಕರ ರವಿಯಿಂದ ಈ ಒಂದು ಕೃತ್ಯ ನಡೆದಿದೆ.ಕೊಲೆಗೆ ಸಂಬಂಧಿಸಿದಂತೆ ರವಿ ಮತ್ತು ಪ್ರೇಯಸಿ ಪ್ರಾಜಕ್ತ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ಸಂಭಂದಿಸಿದಂತೆ ನಿಪ್ಪಾಣಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.