ಬೆಳಗಾವಿ : ಇತ್ತೀಚಿಗೆ ಲೈಂಗಿಕ ದೌರ್ಜನ್ಯ ಪ್ರಕರಣಗಳು, ಅತ್ಯಾಚಾರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಅಲ್ಲದೆ ನಿನ್ನೆ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಯುವತಿಗೆ ಮದ್ಯದಲ್ಲಿ ಡ್ರಗ್ಸ್ ಮಿಶ್ರಣ ಮಾಡಿ ಅತ್ಯಾಚಾರ ಮಾಡಿರುವ ಘಟನೆ ವರದಿಯಾಗಿತ್ತು. ಇದೀಗ ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದಲ್ಲಿ ಡ್ರಾಪ್ ಕೊಡುವ ನೆಪದಲ್ಲಿ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ನಡೆದಿದೆ.
ಹೌದು ಡ್ರಾಪ್ ಕೊಡುವ ನೆಪದಲ್ಲಿ ಕಾಮುಕನೋರ್ವ 12 ವರ್ಷದ ಶಾಲಾ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಸಾರ್ವಜನಿಕರಿಂದ ಗೂಸಾ ತಿಂದ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ಪಟ್ಟಣದಲ್ಲಿ ನಡೆದಿದೆ. ಸುನೀಲ್ ದೀಪಾಳೆ ಎಂಬಾತ ಇಂತ ಹೇಯ ಕೃತ್ಯ ಎಸಗಿದ್ದು. ಆರೋಪಿಯು ರಾಯಭಾಗ ರೈಲ್ವೆ ಸ್ಟೇಷನ್ ಕೈರಕೋಡಿ ನಿವಾಸಿಯಾಗಿದ್ದಾನೆ ಎನ್ನಲಾಗಿದೆ.
ಬಾಲಕಿ ಪಟ್ಟಣದ ಕಂಚರವಾಡಿ ರೋಡ್ ಕಡೆಯಿಂದ ತೆರಳುತ್ತಿದ್ದ ವೇಳೆ ಬೈಕ್ ಮೇಲೆ ಅದೇ ರಸ್ತೆಯಲ್ಲಿ ಬಂದಿದ್ದ ಕಾಮುಕ. ಈ ವೇಳೆ ಬಾಲಕಿ ಒಂಟಿಯಾಗಿರುವುದು ಕಂಡು ಬೈಕ್ ನಿಲ್ಲಿಸಿದ್ದಾನೆ. ಮನೆಯವರಿಗೆ ಡ್ರಾಪ್ ಕೊಡುತ್ತೇನೆ ಬಾ ಎಂದು ಬಾಲಕಿಗೆ ಪುಸಲಾಯಿತಿ ಬೈಕ್ ಮೇಲೆ ಹತ್ತಿಸಿಕೊಂಡಿರುವ ಕಾಮುಕ. ಬಳಿಕ ಹೇಳಿದ ಜಾಗಕ್ಕೆ ಡ್ರಾಪ್ ಕೊಡದೇ ಬಾಲಕಿಯನ್ನ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.
ಆರೋಪಿಯು ಅತ್ಯಾಚಾರಕ್ಕೆ ಯತ್ನಿಸಿದಾಗ ಭಯಗೊಂಡು ಜೋರಾಗಿ ಕಿರುಚಿದ್ದಾಳೆ. ಬಾಲಕಿಯ ಕಿರುಚಾಟ ಕೇಳಿದ ಸಾರ್ವಜನಿಕರು ಕೂಡಲೇ ಸ್ಥಳಕ್ಕೆ ತೆರಳಿ ಕಾಮುಕನ ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು. ಬಾಲಕಿ ಮೇಲೆ ಅತ್ಯಾಚಾರ ಯತ್ನ ಸಂಬಂಧ ರಾಯಭಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ