ಬೆಂಗಳೂರು : ಬೆಂಗಳೂರಿನಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ ಅಂತ ಹೇಳಲಾಗುತ್ತಿತ್ತು. ಆದರೆ ಇದೀಗ ಪುರುಷರಿಗೂ ಕೂಡ ಕಳ್ಳರ ಕಾಟ ತಪ್ಪಿಲ್ಲ. ಸ್ಕೂಟಿಯಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿ ದರೋಡೆ ನಡೆಸಲಾಗಿದೆ.
ಹೌದು ಬೆಂಗಳೂರಿನಲ್ಲಿ ತಡರಾತ್ರಿ ರಸ್ತೆಯಲ್ಲಿ ತೆರಳುತ್ತಿದ್ದ ಸ್ಕೂಟಿಯಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ದರೋಡೆಕೋರರು ಅಡ್ಡಗಟ್ಟಿ ದರೋಡೆ ನಡೆಸಿದ್ದಾರೆ. ಬೆಂಗಳೂರಿನ ಶಾಂತಿನಗರದ ಚರ್ಚ್ ರಸ್ತೆಯಲ್ಲಿ ಮೂವರಿಂದ ಈ ಒಂದು ಕೃತ್ಯ ಎಸಗಲಾಗಿದೆ. ನಿನ್ನೆ ದರೋಡೆ ಮಾಡಿರುವ ಘಟನೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪ್ರತಿರೋಧ ಒಡ್ಡಿದ ವ್ಯಕ್ತಿಯ ಮೇಲೆ ಮನ ಬಂದಂತೆ ಲಾಂಗ್ ನಿಂದ ದಾಳಿ ಸಹ ಮಾಡಿದ್ದಾರೆ. ಅಲ್ಲದೆ ಮೊಬೈಲ್ ಕದ್ದು ದರೋಡೆಕೋರರು ಪರಾರಿಯಾಗಿದ್ದಾರೆ.ವಿಲ್ಸನ್ ಗಾರ್ಡನ್ ಠಾಣೆಯ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ.








