ಬೆಂಗಳೂರು : ಬೆಂಗಳೂರಿನ ಬನ್ನೇರುಘಟ್ಟ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಹೌದು ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಮನೆಯ ಮೇಲೆ ದಾಳಿಸಿದ ಪೊಲೀಸರು ಸುಮಾರು 10 ಲಕ್ಷ ಮೌಲ್ಯದ 9 ಕೆಜಿಗೂ ಅಧಿಕ ಗಾಂಜಾ ಜಪ್ತಿ ಮಾಡಿದ್ದು, ಅಲ್ಲದೆ ಓರ್ವ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ
ಬಂಧಿತ ಆರೋಪಿಯನ್ನು ರುಕ್ಸನ ಎಂದು ತಿಳಿದುಬಂದಿದ್ದು, ಗಾಂಜಾ ಮಾರುತಿದ್ದ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ಮಾಡಿದ್ದಾರೆ. ಆರೋಪಿ ರುಕ್ಸಾನ ಬಳಿ 10 ಲಕ್ಷ ಮೌಲ್ಯದ 9 ಕೆಜಿ 850 ಗ್ರಾಮ ಗಾಂಜಾವನ್ನು ಇದೆ ವೇಳೆ ಜಪ್ತಿ ಮಾಡಿಕೊಂಡಿದ್ದಾರೆ. ಬಿಲ್ದಳಹಳ್ಳಿಯ ರುಕ್ಸನಳನ್ನು ಅರೆಸ್ಟ್ ಮಾಡಿದ್ದು, ಉಳಿದ ಮೂವರು ಸ್ಥಳದಿಂದ ಪರಾರಿಯಾಗಿದ್ದಾರೆ.