ಬಳ್ಳಾರಿ : ಬಳ್ಳಾರಿಯಲ್ಲಿ ಬ್ಯಾನರ್, ಗಲಾಟೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಶಾಸಕ ಜನಾರ್ದನ ರೆಡ್ಡಿ ಮನೆಗೆ ಹುಬ್ಬಳ್ಳಿಯಿಂದ ಬಾಂಬ್ ನಿಷ್ಕ್ರಿಯ ದಳ ಹಾಗೂ ಎಫ್ಎಸ್ಎಲ್ ತಂಡ ಭೇಟಿ ನೀಡಿದ್ದು, ಇದೀಗ ಶಾಸಕ ಜನಾರ್ಧನ ರೆಡ್ಡಿ ಮನೆಯ ಮುಂದೆ ಮತ್ತೊಂದು ಬುಲೆಟ್ ಪತ್ತೆಯಾಗಿದೆ.
ಹೌದು ಶಾಸಕ ಜನಾರ್ಧನರೆಡ್ಡಿ ಮನೆ ಮುಂಭಾಗದಲ್ಲಿ ಮತ್ತೊಂದು ಬುಲೆಟ್ ಪತ್ತೆಯಾಗಿದೆ. ಬುಲೆಟ್ ಪತ್ತೆಯನ್ನು ಬಾಂಬ್ ನಿಷ್ಕ್ರಿಯ ದಳ ಇದೀಗ ಪತ್ತೆ ಮಾಡಿದೆ. ಬುಲೆಟ್ ಪತ್ತೆ ಹಚ್ಚುವ ಮಷೀನ್ ನಿಂದ ಮತ್ತೊಂದು ಬುಲೆಟ್ ಪತ್ತೆಯಾಗಿದೆ. ಪತ್ತೆಯಾದ ಬುಲೆಟ್ 9 MM ಇದ್ದು, ಫೋಟೋ ಚಿತ್ರೀಕರಣ ಕೂಡ ಮಾಡಲಾಗಿದೆ. ಸ್ಥಳದಲ್ಲಿ ಎಫ್ ಎಸ ಎಲ್ ತಂಡ ಇರುವುದರಿಂದ ಫೋಟೋ ಚಿತ್ರೀಕರಣ ಮಾಡಲಿದ್ದಾರೆ.
ಚಿತ್ರೀಕರಣದ ಬಳಿಕ ಅಧಿಕಾರಿಗಳು ಬುಲೆಟ್ ರವಾನೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. FSL ಅಧಿಕಾರಿಗಳಿಂದ ಬುಲೆಟ್ ಪತ್ತೆಯಾದ ಸ್ಥಳ ಅಳತೆ ಮಾಡಲಾಗುತ್ತಿದೆ ಬುಲೆಟ್ ಪತ್ತೆಯಾದ ಸ್ಥಳ ಮತ್ತು ಬ್ಯಾರಿಕೆ ಇರುವಂತಹ ಅಂತರ ಬುಲೆಟ್ ಎಷ್ಟು ದೂರದಿಂದ ಹಾರಿದೆ ಎಂಬುದರ ಕುರಿತು ಅಳತೆ ಮಾಡುತ್ತಿದ್ದಾರೆ.








