ಬೆಂಗಳೂರು : ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ಕೋರ್ಟಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ಇಮೇಲ್ ಮೂಲಕ ಕಿಡಿಗೇಡಿಗಳು ಬಾಮ್ ಇಟ್ಟಿರುವುದಾಗಿ ಬೆದರಿಕೆ ಸಂದೇಶ ಕಳುಹಿಸಿದ್ದಾರೆ.
ಕೋರ್ಟ್ನಲ್ಲಿ 12 ಆರ್ ಡಿ ಎಕ್ಸ್ ಇಟ್ಟಿರುವುದಾಗಿ ಬೆದರಿಕೆ ಸಂದೇಶ ಕಳುಹಿಸಿದ್ದಾರೆ. ಬಾಂಬ್ ಬೆದರಿಕೆ ಸಂದೇಶ ಬಂದ ತಕ್ಷಣ ಕೋರ್ಟ್ ಹಾಲ್ನಲ್ಲಿ ಇದ್ದ ನ್ಯಾಯಾಧೀಶರು ವಕೀಲರು , ಕಕ್ಷಿದಾರರು ಹಾಗೂ ಸಿಬ್ಬಂದಿಗಳು ಹೊರಗಡೆ ಬಂದಿದ್ದಾರೆ. ಇಂದು ಒಂದೇ ದಿನ ಧಾರವಾಡ ಹೈಕೋರ್ಟ್ ಪೀಠ, ಚಿತ್ರದುರ್ಗ, ದಾವಣಗೆರೆ, ಮಡಿಕೇರಿ ಜಿಲ್ಲಾ ಕೋರ್ಟ್ ಗಳಿಗೆ ಬೆದರಿಕೆ ಸಂದೇಶ ಬಂದಿದೆ.








