ಬಳ್ಳಾರಿ : ಬಳ್ಳಾರಿಯಲಿ ಶಾಸಕ ಜನಾರ್ಧನ ರೆಡ್ಡಿ ಅವರ ಮನೆ ಮುಂದೆ ಬ್ಯಾನರ್ ಕಟ್ಟುವ ವಿಚಾರವಾಗಿ ಗಲಾಟೆ ಆಗಿತ್ತು ಈ ಒಂದು ಘರ್ಷಣೆ ವೇಳೆ ಶಾಸಕ ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿ ಗನ್ ಮ್ಯಾನ್ ಗಾಳಿಯಲ್ಲಿ ಗುಂಡು ಹಾರಿಸಿದ್ದು ಹಾಗೂ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಗೆ ತಗಲಿ ಆತ ಸಾವನಪ್ಪಿದ್ದಾನೆ.
ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಾಸಕ ಜನಾರ್ದನ ರೆಡ್ಡಿ ಮತ್ತಷ್ಟು ವಿಡಿಯೋಗಳನ್ನು ರಿಲೀಸ್ ಮಾಡಿದ್ದಾರೆ. ಶ್ರೀರಾಮುಲು ಅವರನ್ನು ಹೊಡೆಯಿರಿ ಅಂತ ಸತೀಶ್ ರೆಡ್ಡಿ ಹೇಳುತ್ತಿದ್ದ ಗಲಾಟೆಯ ವೇಳೆ ಶಾಸಕ ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿ ಹೇಳುತ್ತಿದ್ದ. ಪ್ರಿಪ್ಲಾನ್ ಮಾಡಿಯೆ ಕಾಂಗ್ರೆಸ್ ನವರು ಈ ಗಲಾಟೆ ಮಾಡಿದ್ದಾರೆ. ರಾಮಲು ಏನು ದೊಡ್ಡ ಬ್ಯಾಡರ ನಾಯಕನ ಅಂತ ಹೇಳುತ್ತಿದ್ದ. ಆ ವಿಡಿಯೋ ಈಗ ಎಲ್ಲಾ ಕಡೆ ಹರಿದಾಡುತ್ತಿದೆ.
ಪ್ರಕರಣವನ್ನು ಸಿಐಡಿಗೆ ಕೊಟ್ಟಿದ್ದು ಇದು ಕಣ್ಣೀರು ಒರೆಸುವ ತಂತ್ರವಾಗಿದೆ. ಇಷ್ಟೊತ್ತಿಗೆ ಭರತ್ ರೆಡ್ಡಿ ಮತ್ತು ಸತೀಶ್ ರೆಡ್ಡಿ ಅರೆಸ್ಟ್ ಮಾಡಬೇಕಿತ್ತು. ಸಿಐಡಿ ಬೇರೆ ಅಲ್ಲ ಪೊಲೀಸರು ಬೇರೆ ಅಲ್ಲ. ಬ್ಯಾನರ್ ಅಷ್ಟೇ ಬದಲಾವಣೆ ಆಗಿದೆ. ಸಿಬಿಐ ಹಾಗೂ ಹಾಲಿ ಜಡ್ಜ್ ನೇತೃತ್ವದಲ್ಲಿ ತನಿಖೆ ಮಾಡಬೇಕು ಎಂದು ಶಾಸಕ ಜನಾಧನ ರೆಡ್ಡಿ ಒತ್ತಾಯಿಸಿದರು.








