ಬಳ್ಳಾರಿ : ಬಳ್ಳಾರಿ ಬ್ಯಾನರ್ ಗಲಾಟೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ಕಾರ್ಯಕರ್ತ ಫೈರಿಂಗ್ ವೇಳೆ ಸಾವನಪ್ಪಿದ್ದ ಇದೀಗ ಈ ಒಂದು ಘಟನೆಗೆ ಸಂಬಂಧಿಸಿದಂತೆ ಮತ್ತೊಬ್ಬ ಅಧಿಕಾರಿ ವರ್ಗಾವಣೆಯಾಗಿದ್ದು ಡಿಐಜಿಬಿ ವರ್ತಿಕ ಕಟಿಯಾರ್ ಅವರನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶಿಸಿದೆ. ಹೌದು ಬಳ್ಳಾರಿ ಡಿಐಜಿಪಿ ಆಗಿರುವ ವರ್ತಿಕ ಕಟಿಯಾರ್ ಅನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಬಳ್ಳಾರಿ ಡಿಐಜಿಪಿ ವರ್ತಿಕ ಕಟಿಆರ್ ವರ್ಗಾವಣೆಯಾಗಿದ್ದು ಬಳ್ಳಾರಿಯಲ್ಲಿ ಬ್ಯಾನರ್ ಗಲಾಟೆಗೆ ಕಾಂಗ್ರೆಸ್ ಕಾರ್ಯಕರ್ತ ಬಲಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ರಾಜ್ಯ ಸರ್ಕಾರ ವರ್ತಿಕ ಕಟಿಯಾರ್ ಅವರನ್ನು ವರ್ಗಾವಣೆ ಮಾಡಿದೆ. ಸಿವಿಲ್ ರೈಟ್ಸ್ ಮತ್ತು ಎನ್ ಫೋರ್ಸ್ಮೆಂಟ್ ವಿಭಾಗಕ್ಕೆ ವರ್ಗಾವಣೆ ಮಾಡಿದ್ದು ಇನ್ನು ನೂತನ ಐಜಿಪಿಯಾಗಿ ಡಾ. ಬಿ ಎಸ್ ಹರ್ಷ ಅವರನ್ನು ಸರ್ಕಾರ ನೇಮಕ ಮಾಡಿದೆ.
ಇದೇ ಪ್ರಕರಣದಲ್ಲಿ ಈ ಹಿಂದೆ ಎಸ್‌ಪಿ ಪವನ್ ನಜೂರ್ ಅವರನ್ನು ಸರ್ಕಾರ ಅಮಾನತುಗೊಳಿಸಿತ್ತು. ಬಳಿಕ ಅವರು ತಮ್ಮ ಸ್ನೇಹಿತನ ಫಾರ್ಮ್ ಹೌಸ್ ನಲ್ಲಿ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ಹೇಳಲಾಗಿತ್ತು . ಇದೀಗ ಡಿಐಜಿಬಿ ವರ್ತಿಕ ಕಟಿಯಾರ್ ಅವರನ್ನು ಸಹ ವರ್ಗಾವಣೆ ಮಾಡಲಾಗಿದೆ.








