ಬಳ್ಳಾರಿ : ಬಳ್ಳಾರಿಯಲ್ಲಿ ಶಾಸಕ ಜನಾರ್ಧನ ರೆಡ್ಡಿ ಅವರ ಮನೆ ಮುಂದೆ ಬ್ಯಾನರ್ ಕಟ್ಟುವ ವಿಚಾರಕ್ಕೆ ಗಲಾಟೆ ಆಗಿ ಓರ್ವ ಕಾಂಗ್ರೆಸ್ ಕಾರ್ಯಕರ್ತ ಗುಂಡಿನ ದಾಳಿಗೆ ಬಲಿಯಾಗಿದ್ದ. ಈ ಒಂದು ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ಹಸ್ತಾಂತರಿಸಿತ್ತು. ಇದೀಗ ಸಿಐಡಿ ಅಧಿಕಾರಿಗಳು ಇಬ್ಬರು ಖಾಸಗಿ ಮ್ಯಾನ್ ಗಳನ್ನು ಅರೆಸ್ಟ್ ಮಾಡಿದ್ದಾರೆ.
ಗನ್ ಮ್ಯಾನ್ ಗಳಾದ ಬಲ್ಜೀತ್ ಸಿಂಗ್ ಮತ್ತು ಬಲ್ವಿನಂದರ್ ಸಿಂಗ್ ಬಂಧಿತರು ಎಂದು ತಿಳಿದು ಬಂದಿದ್ದು, ಶಾಸಕ ಭರತ ರೆಡ್ಡಿ ಜೊತೆ ಘಟನಾ ಸ್ಥಳಕ್ಕೆ ಇಬ್ಬರು ಬಂದಿದ್ದರು. ಫೈರಿಂಗ್ ಮತ್ತು ಕೊಲೆ ಪ್ರಕರಣ ಸಂಬಂಧ ಸಿಐಡಿ ಅಧಿಕಾರಿಗಳು ಇಬ್ಬರನ್ನು ಅರೆಸ್ಟ್ ಮಾಡಿ ವಿಚಾರಣೆ ಮಾಡುತ್ತಿದ್ದಾರೆ. ಬಳ್ಳಾರಿಯ ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಇಬ್ಬರು ಗನ್ ಮ್ಯಾನ್ ಗಳ ವಿಚಾರಣೆ ನಡೆಯುತ್ತಿದೆ.








