ಕೋಲಾರ : ಬಾಗಲಕೋಟೆಯಲ್ಲಿ ಬೆಚ್ಚಿ ಬೀಳಿಸುವಂತಹ ಘಟನೆ ನಡೆದಿದ್ದು, ಕುರಿಗಳ್ಳರನ್ನು ರೇಡ್ ಹ್ಯಾಂಡ್ ಆಗಿ ಹಿಡಿದ ವ್ಯಕ್ತಿಯನ್ನು ಕೊಡಲಿಯಿಂದ ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಕೆರೂರದ ಹಳಗೇರಿ ಗ್ರಾಮದ ಟೋಲ್ ನಾಕಾ ಬಳಿ ನಡೆದಿದೆ.
ಕೊಲೆಯಾದ ಯುವಕನನ್ನು ಶರಣಪ್ಪ ಜಮ್ಮನಕಟ್ಟಿ (23) ಎಂದು ತಿಳಿದುಬಂದಿದೆ. ಶರಣಪ್ಪ ಕುರಿ ದಡ್ಡಿಯ ಮೇಲೆ ಕುರಿಗಳರು ದಾಳಿ ನಡೆಸಿ ಕಳ್ಳತನಕ್ಕೆ ಎತ್ನಿಸಿದ್ದಾರೆ ಈ ವೇಳೆ ಶರಣಪ್ಪ ರೆಡ್ ಹ್ಯಾಂಡಾಗಿ ಕಳ್ಳರನ್ನು ಹಿಡಿದಿದ್ದಾನೆ. ಮೂವರಲ್ಲಿ ಯಾಕೂb ಎನ್ನುವ ಕಳ್ಳನನ್ನು ಶರಣಪ್ಪ ಹಿಡಿದಿದ್ದಾನೆ.
ಆದರೆ ಇನ್ನಿಬ್ಬರು ಆರೋಪಿಗಳು ಕೊಡಲಿಯಿಂದ ಶರಣಪ್ಪ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಯಾಕೂಬ್ ನನ್ನು ಬಿಡಿಸಿಕೊಂಡು ಪರಾರಿಯಾಗಿದ್ದಾರೆ. ಈ ವೇಳೆ ಗಂಭೀರವಾಗಿ ಹಲ್ಲೆಗೊಳಗಾದ ಶರಣಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಕೆರೂರು ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.