ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯಲ್ಲಿ ಬೆಚ್ಚಿಬಿಳಿಸುವಂತಹ ಘಟನೆ ನಡೆದಿದ್ದು, ನಿಧಿಯ ಆಸೆಗಾಗಿ ಮನೆಯ ಸೊಸೆಯನ್ನೇ, ತೋಟದ ಮನೆಯಲ್ಲಿ ಗುಂಡಿ ತೋಡಿ ಜೀವಂತ ಸಮಾಧಿಗೆ ಆಕೆಯ ಅತ್ತೆ ಮಾವ ಸಂಚು ರೂಪಿಸಿರುವ ಘಟನೆ, ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಯಂಡಿಗೇರಿ ಗ್ರಾಮದ ತೋಟದ ಮನೆಯಲ್ಲಿ ಈ ಒಂದು ಆಘಾತಕಾರಿ ಘಟನೆ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಯಂಡಿಗೇರಿ ಗ್ರಾಮ ಸೊಸೆ ಮುತ್ತಕ್ಕ ಪೂಜಾರ ಸಮಾಧಿ ಮಾಡಲು ಮನೆಯಲ್ಲಿಯೇ ಗುಂಡಿ ತೋಡಿದ್ದಾರೆ. ಸುಮಾರು 5 ಅಡಿ ಅಗಲ 5 ಅಡಿ ಆಳದ ಗುಂಡಿ ತೋಡಿದ್ದ ಆರೋಪ ಕೇಳಿ ಬರುತ್ತಿದೆ. ಅತ್ತೆ, ಮಾವ,ನಾದಿನಿ, ವಿರುದ್ಧ ಸೊಸೆ ಮುತ್ತಕ್ಕ ಸಂಬಂಧಿಕರು ಈ ಒಂದು ಆರೋಪ ಮಾಡಿದ್ದಾರೆ.
ಸೊಸೆ ಮುತ್ತಕ್ಕ ಪೂಜಾರಗಳನ್ನು ಬಲಿಕೊಡಲು ಸಂಚು ರೂಪಿಸಿದ್ದಾರೆ ಎಂದು ಆರೋಪ ಕೇಳಿ ಬಂದಿದೆ. ಈ ವೇಳೆ ಸಂಬಂಧಿಕರು ಊರಿಗೆ ಬರುವ ವಿಚಾರ ತಿಳಿದ್ದು ಗುಂಡಿ ಮುಚ್ಚಿದ್ದಾರೆ. ಮೂರ ವಿರುದ್ಧ ಮುಟ್ಟಕ್ಕ ಸಹೋದರ ನಾಗರೆಡ್ಡಿ ಈ ಒಂದು ಆರೋಪ ಮಾಡುತ್ತಿದ್ದಾರೆ. ವಿಷಯ ತಿಳಿದು ಪೊಲೀಸರು ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.








