ಬಾಗಲಕೋಟೆ : ತನ್ನ ಮೇಲೆ ಕಳ್ಳತನ ಆರೋಪ ಬಂದಿದ್ದಕ್ಕೆ ಮನನೊಂದು 8ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ಬಾಗಲಕೋಟೆ ತಾಲೂಕಿನ ಕದಾಂಪುರ ಗ್ರಾಮದಲ್ಲಿ ನಡೆದಿದೆ.
ನೀರಿನ ಟ್ಯಾಂಕರ್ ಗಳ ಮೇಲೆ ನಿಗಾ ಇಟ್ಟ ಕರ್ನಾಟಕ ಚುನಾವಣಾ ಆಯೋಗ : ವರದಿ
ಮೃತ ವಿದ್ಯಾರ್ಥಿನಿಯನ್ನು ದಿವ್ಯಾ ಬಾರಕೇರ (14) ಎಂದು ಗುರುತಿಸಲಾಗಿದ್ದು, ಅನುಮಾನಾಸ್ಪವಾಗಿ ಸಾವಿಗೀಡಾಗಿದ್ದಾಳೆ ಎಂದು ಕೂಡ ಹೇಳಲಾಗುತ್ತಿದೆ.ಪ್ರೌಢಶಾಲಾ ವಿದ್ಯಾರ್ಥಿನಿ ದಿವ್ಯಾ ಬಾರಕೇರ ಮೇಲೆ ಶಾಲಾ ಶಿಕ್ಷಕಿಯರು ಸಂಶಯ ಪಟ್ಟಿದ್ರಾ ಎಂಬ ಅನುಮಾನ ಮೂಡಿದೆ.
ಲೋಕಸಭೆ ಚುನಾವಣೆ: ಮೇ ತಿಂಗಳಿನಲ್ಲಿ ನಡೆಯಬೇಕಿದ್ದ ಈ ಪರೀಕ್ಷೆ ಮುಂದೂಡಿಕೆ?
ಬಾಗಲಕೋಟೆ ತಾಲ್ಲೂಕಿನ ಕದಾಂಪುರ ಗ್ರಾಮದಲ್ಲಿ ತಡವಾಗಿ ಘಟನೆ ಬೆಳಕಿಗೆ ಬಂದಿದೆ.ಏಕೆಂದರೆ ಮಾರ್ಚ್ 14 ರಂದು ಶಿಕ್ಷಕಿಯೊಬ್ಬರ 2 ಸಾವಿರ ಹಣ ಕಳೆದು ಹೋಗಿತ್ತು. ಈ ಹಿನ್ನೆಲೆಯಲ್ಲಿ ಶಿಕ್ಷಕರು ಐವರು ವಿದ್ಯಾರ್ಥಿಗಳ ಮೇಲೆ ಸಂಶಯ ಬಂದು ದೇವರ ಮೇಲೆ ಪ್ರಮಾಣ ಮಾಡಿಸಿದ್ದರು. ನಂತರ ಕೊಠಡಿಯೊಂದರಲ್ಲಿ ಶಾಲಾ ಸಮವಸ್ತ್ರ ಸಹಿತ ಬಿಚ್ಚಿಸಿ ಚೆಕ್ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಮೊಬೈಲ್ ಬಳಕೆದಾರರ ಗಮನಕ್ಕೆ : ಜುಲೈ 1 ರಿಂದ ಬದಲಾಗಲಿದೆ ʻಸಿಮ್ ಕಾರ್ಡ್ʼ ಗೆ ಸಂಬಂಧಿಸಿದ ಈ ನಿಯಮ!
ಹೀಗಾಗಿ ಕಳ್ಳತನದ ಅನುಮಾನ ವ್ಯಕ್ತಪಡಿಸಿ ಅವಮಾನವಾದ ಹಿನ್ನೆಲೆಯಲ್ಲಿ ಮನನೊಂದು ನಿನ್ನೆ ಮಾರ್ಚ್ 16 ರಂದು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಬಾಗಲಕೋಟೆ ಗ್ರಾಮೀಣ ಠಾಣೆಯಲ್ಲಿ ಬಾಲಕಿ ಕುಟುಂಬಸ್ಥರಿಂದ ದೂರು ದಾಖಲು ಮಾಡಲಾಗಿದೆ.