ಬೆಂಗಳೂರು : ಆಹಾರ ಧಾನ್ಯ ಸಾಗಾಣಿಕೆ ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ 15 ದಿನಗಳ ಕಾಲ ಗಡುವು ನೀಡಲಾಗಿತ್ತು. ಚಿಲ್ಲರೆ ಸಾಗಾಣಿಕೆ ಗುತ್ತಿಗೆದಾರ ಸಂಘದ ರಾಜ್ಯಾಧ್ಯಕ್ಷ ಷಣ್ಮುಖಪ್ಪ ರಾಜ್ಯ ಸರ್ಕಾರಕ್ಕೆ ಗಡುವು ನೀಡಿದ್ದರು. ಯಾವುದೇ ಭರವಸೆ ಈಡೇರಿಸಿದ ಹಿನ್ನೆಲೆಯಲ್ಲಿ ಅನ್ನಭಾಗ್ಯ ಸಾಗಾಣಿಕೆ ಬಂದ್ ಮಾಡಿ ಇದೀಗ ಕರೆ ನೀಡಿದ್ದಾರೆ.
ಹೌದು ಕರ್ನಾಟಕ ರಾಜ್ಯದ ಅನ್ನಭಾಗ್ಯ ಅಕ್ಕಿ ಸಪ್ಲೈ ಮಾಡುವ ಲಾರಿ ಮಾಲೀಕರು ಮತ್ತು ಗುತ್ತಿಗೆದಾರರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ಕಾರಣ ಕಳೆದ ಫೆಬ್ರವರಿನಿಂದ ಹಿಂದಿನವರೆಗೆ ಐದು ತಿಂಗಳ ಬಾಕಿ ಹಣ ಬಿಡುಗಡೆ ಮಾಡಬೇಕಾಗಿತ್ತು. ರಾಜ್ಯಾದ್ಯಂತ ಇರುವ ಎಲ್ಲಾ ತಾಲೂಕು ಮಟ್ಟ ಜಿಲ್ಲಾ ಕೇಂದ್ರಗಳಿಗೆ ಸೊಸೈಟಿಗಳಿಗೆ ಹಾಕಿ ಸಪ್ಲೈ ಮಾಡುತ್ತಾರೋ ಅಕ್ಕಿ ಸಪ್ಲೈ ಮಾಡುವಂತಹ ಲಾರಿ ಮಾಲೀಕರಿಗೆ ಇಲ್ಲಿವರೆಗೂ ಆಹಾರ ಇಲಾಖೆ ಹಣ ಬಿಡುಗಡೆ ಮಾಡಿಲ್ಲ ಈ ಒಂದು ಹಣದ ಮೊತ್ತ 250 ಕೋಟಿ ರೂಪಾಯಿ ಇದ್ದು ಬಾಕಿ ಹಣ ಬಿಡುಗಡೆ ಮಾಡಬೇಕಿದೆ.
ಹಾಗಾಗಿ ಸರ್ಕಾರದ ವಿರುದ್ಧ ಪಡಿತರ ಆಹಾರ ಧಾನ್ಯಗಳ ಸಗಟು ಚಿಲ್ಲರೆ ಸಾಗಾಣಿಕೆ ಗುತ್ತಿಗೆದಾರ ಸಂಘದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಇಂದಿನಿಂದ ಅನ್ನಭಾಗ್ಯ ಆಹಾರ ಧಾನ್ಯ ಸಾಗಾಣೆ ಬಂದ್ ಮಾಡುವಂತೆ ಕರೆ ನೀಡಿದ್ದಾರೆ.ಬಾಕಿ ಹಣ ಕೊಡುವುದಾಗಿ ಬರವಸೆಯ ನೀಡಿ, ಹಣ ಕೊಟ್ಟಿಲ್ಲ ಕಳೆದ ನಾಲ್ಕು ತಿಂಗಳ ಬಾಕಿ ಅಣ್ಣ ನಮಗೆ ಬರಬೇಕಿದೆ 3 ರಿಂದ 4,000 ಡ್ರೈವರ್ ಗಳಿಗೆ ಸಂಕಷ್ಟ ಎದುರಾಗಿದ್ದು ಸರಕಾರದಿಂದ 250 ಕೋಟಿ ಬಾಕಿ ಹಣ ಬರಬೇಕಿದೆ. ಫೆಬ್ರುವರಿಯಿಂದ ಮೇ ತಿಂಗಳ ವರೆಗೆ ಬಾಕಿ ಹಣ ಉಳಿಸಿಕೊಳ್ಳಲಾಗಿದೆ ಹಾಗಾಗಿ ಚಿಲ್ಲರೆ ಸಾಗಾಣಿಕೆ ಗುತ್ತಿಗೆದಾರ ಸಂಘದ ರಾಜ್ಯಾಧ್ಯಕ್ಷ ಷಣ್ಮುಖಪ್ಪ ಅನಿರ್ದಿಷ್ಟಾವಧಿ ಧರಣಿಗೆ ಕರೆ ನೀಡಿದ್ದಾರೆ.