ಚಿತ್ರದುರ್ಗ : ಚಿತ್ರದುರ್ಗ ನಗರದ ಖಾಸಗಿ ಶಾಲೆ ಬಳಿ ನವಜಾತ ಶಿಶುವಿನ ಶವ ಪತ್ತೆಯಾಗಿದ್ದು, ಹೂತಿದ್ದ ಶಿಶುವಿನ ಶವವನ್ನು ನಾಯಿಗಳು ಕಚ್ಚಿ ತಂದಿರುವ ಶಂಕೆ ವ್ಯಕ್ತವಾಗಿದೆ.
ಚಿತ್ರದುರ್ಗ ನಗರದ ಚಳ್ಳಕೆರೆ ಗೇಟ್ ಬಳಿಯ ವೆಂಕಟೇಶ್ವರ್ ಶಾಲೆಯ ಮೈದಾನದಲ್ಲಿ ಶಿಶುವಿನ ಶವ ಪತ್ತೆಯಾಗಿದ್ದು, ಹೂತಿದ್ದ ಶಿಶುವನ್ನು ನಾಯಿಗಳು ಕಚ್ಚಿ ತಿಂದು ಹಾಕಿರುವ ಶಂಕೆ ವ್ಯಕ್ತವಾಗಿದೆ.
ಅರೆಬರೆ ಹೂತಿದ್ದ ನವಜಾತ ಶಿಶುವನ್ನು ನಾಯಿಗಳು ಕಚ್ಚಿ ಅರ್ಧ ತಿಂದು ಬಿಟ್ಟುಹೋಗಿರುವ ಶಂಕೆ ವ್ಯಕ್ತವಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.