ಉತ್ತರಪ್ರದೇಶ : ಉತ್ತರ ಪ್ರದೇಶದ ಆಯೋಧ್ಯೆಯಲ್ಲಿ ಇಂದು ರಾಮ ನವಮಿ ಅತ್ಯಂತ ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಯಿತು. ಇದೇ ವೇಳೆ ಶ್ರೀ ರಾಮಲಲ್ಲ ಹಣೆಗೆ ಸೂರ್ಯ ರಶ್ಮಿ ತಿಲಕ ನೋಡಿ ಭಕ್ತರು ಪುನೀತರಾದರು. ಸೂರ್ಯ ರಶ್ಮಿ ನೇರವಾಗಿ ರಾಮಲಲ್ಲ ವಿಗ್ರಹದ ಹಣೆಗೆ ಸ್ಪರ್ಶಿಸಿದ್ದು ರಾಮಲಲ್ಲಾಗೆ ಸೂರ್ಯನ ತಿಲಕವಿಟ್ಟಂತೇ ಕಾಣಿಸಿತು.
ಸುಮಾರು 4 ನಿಮಿಷಗಳ ಕಾಲ ರಾಮಲಲ್ಲ ಹಣೆಗೆ ಸೂರ್ಯ ರಶ್ಮಿ ತಿಲಕ ಇತ್ತು.ಅಯ್ಯೋಧ್ಯಯಲ್ಲಿ ರಾಮ ಲಾಲ ದರ್ಶನ ಪಡೆದ ಸಹಸ್ರಾರ ಭಕ್ತರು, ಕರ್ನಾಟಕದ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತಿದಂತಹ ಕಪ್ಪು ಶಿಲೆಯಲ್ಲಿ ಶ್ರೀ ರಾಮನ ಸುಮಾರು 15 ಅಡಿ ಎತ್ತರದ ಭವ್ಯ ಮೂರ್ತಿಗೆ ಇಂದು ವಿಶೇಷವಾದ ಪೂಜೆ ಪುನಸ್ಕಾರ ಹಾಗೂ ವಿಶಿಷ್ಟವಾದ ಅಲಂಕಾರ ನೆರವೇರಿಸಲಾಯಿತು.






