ಬೆಂಗಳೂರು : ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಸರ್ಕಾರಿ ಪ್ರೌಢಶಾಲೆಯನ್ನಾಗಿ ಉನ್ನತೀಕರಿಸಿದ ಶಾಲೆಗಳ ವೇತನ ಸೆಳೆಯಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಅಧಿಕಾರವನ್ನು ಪ್ರತ್ಯಾಯೋಜಿಸುವ ಬಗ್ಗೆ ರಾಜ್ಯ ಸರ್ಕಾರವು ಮಹತ್ವದ ಆದೇಶ ಹೊರಡಿಸಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖ 5 ರಲ್ಲಿ ಸರ್ಕಾರಿ ಪ್ರೌಢಶಾಲೆ, ಸೋಮಲಾಪುರ, ಕುರುಗೋಡು ತಾ. ಬಳ್ಳಾರಿ ಜಿಲ್ಲೆ ಶಾಲೆಯ ಶಿಕ್ಷಕರ ವೇತನ ಸೆಳೆಯಲು ಉಲ್ಲೇಖ 4 ರಂತೆ ಸದರಿ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ವೇತನ ಸೆಳೆಯುವ ಅಧಿಕಾರವನ್ನು ಪ್ರತ್ಯಾಯೋಜಿಸಿ ಆದೇಶವನ್ನು ಹೊರಡಿಸಲು ಕೋರಿರುತ್ತಾರೆ.
ಪರಿಶೀಲಿಸಲಾಗಿ, ಉಲ್ಲೇಖ 3 ರ ಸರ್ಕಾರಿ ಆದೇಶದನ್ವಯ 2015-16, 2016-17 ಮತ್ತು 2018-19 ನೇ ಸಾಲಿನಲ್ಲಿ ಒಟ್ಟು 89 ಸರ್ಕಾರಿ ಹಿರಿಯ ಪ್ರಾಥಮಿಕ ಉನ್ನತೀಕರಿಸಿದ ಶಾಲೆಗಳನ್ನು ಸರ್ಕಾರಿ ಪ್ರೌಢಶಾಲೆಯನ್ನಾಗಿ ಉನ್ನತೀಕರಿಸಿ ಆದೇಶೀಸಿರುತ್ತಾರೆ.
ಉಲ್ಲೇಖ 2 ರ ಸರ್ಕಾರಿ ಆದೇಶದನ್ವಯ ಉಲ್ಲೇಖ 3 ರ ಸರ್ಕಾರಿ ಆದೇಶದಲ್ಲಿ ಉನ್ನತೀಕರಿಸಿದ ಈ 89 ಸರ್ಕಾರಿ ಪ್ರೌಢಶಾಲೆಗಳಲ್ಲಿ 42 ಶಾಲೆಗಳಿಗೆ ಮುಖ್ಯ ಶಿಕ್ಷಕರ ಹುದ್ದೆಗಳು ಮಂಜೂರಾತಿಯಾಗಿದ್ದು, 47 ಶಾಲೆಗಳಿಗೆ ಮಂಜೂರಾತಿಯಾಗಿರುವುದಿಲ್ಲ. ಪುಯುಕ್ತ ಈ 47 ಸರ್ಕಾರಿ ಪ್ರೌಢಶಾಲೆಗಳಲ್ಲಿ ಉಲ್ಲೇಖ 2 ರ ಸರ್ಕಾರಿ ಆದೇಶದಲ್ಲಿ ಈ ಶಾಲೆಗಳಲ್ಲಿ ಸೇವಾ ಜೇಷ್ಮತೆಯಲ್ಲಿ ಹಿರಿಯರಾದ ಸಹ ಶಿಕ್ಷಕರುಗಳನ್ನೇ ವೇತನ ಬಟವಾಡೆ ಅಧಿಕಾರಿಯನ್ನಾಗಿ ನೇಮಿಸಿ ಆದೇಶವು ಈಗಾಗಲೇ ಆಗಿರುತ್ತದೆ.
ಅದರಂತೆ ಉಲ್ಲೇಖ 1 ರ ಸರ್ಕಾರಿ ಆದೇಶದಲ್ಲಿ ಮುಖ್ಯ ಶಿಕ್ಷಕರ ಹುದ್ದೆ ಮಂಜೂರಾತಿ ಇಲ್ಲದ ಶಾಲೆಗಳಿಗೆ ಉಲ್ಲೇಖ 2 ರ ಸರ್ಕಾರಿ ಆದೇಶದಂತೆ ಆಯಾ ಸರ್ಕಾರಿ ಪ್ರೌಢಶಾಲೆಗಳಲ್ಲಿ ಸೇವೆಯಲ್ಲಿ ಹಿರಿಯರಾದ ಸಹ ಶಿಕ್ಷಕರುಗಳನ್ನೇ ವೇತನ ಬಟವಾಡೆ ಅಧಿಕಾರಿಯನ್ನಾಗಿ ನೇಮಿಸಿ ವೇತನ ಸೆಳೆಯಲು ತಿಳಿಸಿದೆ.









