ಬೆಂಗಳೂರು ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ನಂದಿ ಗಿರಿಧಾಮ ಬಂದ್ ಮಾಡಲಾಗಿದೆ. ವಿಶ್ವ ಪ್ರಸಿದ್ಧ ಪ್ರವಾಸಿ ತಾಣ ನಂದಿ ಗಿರಿಧಾಮವನ್ನು ಇದೀಗ ಬಂದ್ ಮಾಡಲಾಗಿದೆ. ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗಿರಿಧಾಮ ಬಂದ್ ಮಾಡಲಾಗಿದೆ. ಡಿಸೆಂಬರ್ 31ರ ಮಧ್ಯಾನದಿಂದ ನಂದಿ ಗಿರಿಧಾಮ ಬಂದ್ ಇರಲಿದೆ. ಜನವರಿ 1 ಬೆಳಗ್ಗೆ 10ರವರೆಗೆ ಕ್ಲೋಸ್ ಇರುತ್ತದೆ.
ಹೊಸ ವರ್ಷಾಚರಣೆಗೆ ವಾಹನ ಸಂಚಾರದಲ್ಲಿ ಕೂಡ ಬದಲಾವಣೆ ಆಗಿದ್ದು ಡಿಸೆಂಬರ್ 31 ರಿಂದ ರಾತ್ರಿ 9 ರಿಂದ ರಿಂದ ಸಂಚಾರ ಬದಲಾವಣೆ ಆಗಲಿದೆ ಎಮ್‌ಜಿ ರಸ್ತೆ, ಕ್ವೀನ್ಸ್ ವೃತ್ತದ ಕಡೆಯಿಂದ ಪ್ರಯಾಣಿಸುವವರು ಹಲಸೂರಿನಿಂದ ಮುಂದಕ್ಕೆ ತೆರಳುವ ವಾಹನ ಚಾಲಕರು, ಅನಿಲ್ ಕುಂಬಳೆ ವೃತ್ತದಲ್ಲಿ ಎಡ ರಸ್ತೆ ಮೂಲಕ ತಿರುವು ಪಡೆದುಕೊಳ್ಳಬೇಕು. ಸೆಂಟ್ರಲ್ ಸ್ಟ್ರೈಟ್ ಬಿ ಆರ್ ವಿ ಜಂಕ್ಷನ್ ಬಲ ರಸ್ತೆ ಮೂಲಕ ತಿರುವು ಪಡೆದುಕೊಳ್ಳಬೇಕು ಕಬ್ಬನ ರಸ್ತೆ ಮೂಲಕ ವೆಬ್ಸ್ ಜಂಕ್ಷನ್ ಬಳಿ ಎಂಜಿ ರಸ್ತೆಗೆ ತೆರಳಬಹುದಾಗಿದೆ.
ಹಲಸೂರು ಕಡೆಯಿಂದ ಕಂಟ್ರೋಲ್ಮೆಂಟ್ ಕಡೆಗೆ ತೆರಳಲು ಟ್ರಿನಿಟಿ ವೃತ್ತದಲ್ಲಿ ಬಲ ತಿರುವು ಪಡೆದುಕೊಂಡು ಹಲಸೂರು ರಸ್ತೆ ಡೆಕನ್ಸನ್ ರಸ್ತೆ ಮೂಲಕ ಸಂಚರಿಸಿ ಕಬ್ಬನ್ ರಸ್ತೆ ಮೂಲಕ ಮುಂದೆ ಸಾಗಲು ಅವಕಾಶ ಇದೆ , ಕಾಮರಾಜ ರಸ್ತೆಯಲ್ಲಿ ಕಬ್ಬನ್ ಪಾರ್ಕ್ ರಸ್ತೆ ಜಂಕ್ಷನ್ ನಿಂದ ಕಮರ್ಷಿಯಲ್ ಸ್ಟ್ರೀಟ್ ಜಂಕ್ಷನ್ ವರೆಗೆ ಪಾರ್ಕಿಂಗ್ ವ್ಯವಸ್ಥೆ ಇದೆ.








