ತುಮಕೂರು : ಸಹಕಾರ ಸಚಿವ ಕೇಂದ್ರ ಅವರ ಪುತ್ರ ಹಾಗೂ ಕಾಂಗ್ರೆಸ್ ಎಂಎಲ್ಸಿ ಆಗಿರುವಂತಹ ರಾಜೇಂದ್ರ ರಾಜಣ್ಣ ಅವರ ಹತ್ಯೆಗೆ ಯತ್ನಿಸಲಾಗಿತ್ತು ಎಂದು ನಿನ್ನೆ ರಾಜೇಂದ್ರ ಅವರು ತುಮಕೂರಿನ ಎಸ್ಪಿ ಕಚರಿಗೆ ಭೇಟಿ ನೀಡಿ ದೂರು ನೀಡಿದ್ದರು. ಒಂದು ದೂರು ಹಿನ್ನೆಲೆಯಲ್ಲಿ ಇದೀಗ ಐವರು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಾಗಿದ್ದು ಅಲ್ಲದೆ ಡಿವೈಎಸ್ಪಿ ನೇತೃತ್ವದಲ್ಲಿ ತನಿಖಾ ತಂಡ ರಚನೆ ಕೂಡ ಆಗಿದೆ.
ಹೌದು ಎಂಎಲ್ಸಿ ರಾಜೇಂದ್ರ ಹತ್ಯೆಗೆ ಯತ್ನಿಸಿ ಸುಪಾರಿ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಧುಗಿರಿ ಡಿವೈಎಸ್ಪಿ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದೆ. ಪ್ರಕರಣದ ಸಂಪೂರ್ಣ ತನಿಖೆಯನ್ನು ಡಿವೈಎಸ್ಪಿ ತಂಡ ನಡೆಸಲಿದೆ. ತನಿಖಾ ತಂಡದಲ್ಲಿ ಶೀರಾ ಗ್ರಾಮಾಂತರ ಸಿಪಿಐ ರಾಘವೇಂದ್ರ, ಕ್ಯಾತ್ಸಂದ್ರ ಠಾಣೆ ಪಿಎಸ್ಐ ಚೇತನ್ ಕೂಡ ಇದ್ದಾರೆ.
ಸದ್ಯ ರಾಜೇಂದ್ರ ದೂರಿನ ಮೇಲೆ ಐವರ ವಿರುದ್ಧ ಎಫ್ಐಆರ್ ದಾಖಲಾಗಿದೆ. A1 ಸೋಮ, A2 ಭರತ್, A3 ಅಮಿತ್ A4 ಗುಂಡಾ ಮತ್ತು A5 ಯತೀಶ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಶಿರಾ ಗೇಟ್ ಬಳಿ ಶೆಡ್ ಒಂದರಲ್ಲಿ ರಾಜೇಂದ್ರ ಅವರ ಕೊಲೆಗೆ ಆರೋಪಿಗಳು ಸಂಚು ರೂಪಿಸಿದ್ದರು.ಹೊಸ ಕಾರು ಅಕ್ರಮ ಶಸ್ತ್ರಾಸ್ತ್ರಗಳನ್ನು ಆರೋಪಿಗಳು ಸಂಗ್ರಹಿಸಿದ್ದರು ಎಂದು ತಿಳಿದುಬಂದಿದೆ.