ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಿನ್ನೆ ಉಗ್ರರ ಗುಂಡಿನ ದಾಳಿ ನಡೆದಿತ್ತು. ಅದರ ಬೆನ್ನಲ್ಲೇ, ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗ್ರಹಮಂತ್ರಿ ಅಮಿತ್ ಶಾ, ಸೇರಿದಂತೆ ಹಲವು ಅಧಿಕಾರಿಗಳು ಹಾಗು ಸಚಿವರೊಂದಿಗೆ ಸೇರಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಹತ್ವದ ಸಭೆ ನಡೆಸಿದರು. ಈ ಒಂದು ಸಭೆಯಲ್ಲಿ ಭಾರತ ಪಾಕಿಸ್ತಾನಕ್ಕೆ ರಾಜತಾಂತ್ರಿಕ ತಿರುಗೇಟು ನೀಡಿದ್ದು ತಕ್ಷಣವೇ ಅಟಾರಿ ಮತ್ತು ವಾಘಾ ಗಡಿ ಬಂದ್ ಗೆ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ
ಹೌದು ದೆಹಲಿಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಸಭೆಯಲ್ಲಿ ಈ ಒಂದು ಮಹತ್ವದ ನಿರ್ಧಾರ ಕೈಗೊಂಡಿದ್ದು, ಪಾಕಿಸ್ತಾನದ ಪ್ರಜೆಗಳಿಗೆ ವೀಸಾ ನೀಡದಿರಲು ಭಾರತ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಭಾರತದಿಂದ ಇದೀಗ ರಾಜತಾಂತ್ರಿಕ ತಿರುಗೇಟು ನೀಡಿದ್ದು ಪಾಕಿಸ್ತಾನದಲ್ಲಿರುವ ಭಾರತದ ರಾಯಭಾರಿ ವಾಪಸ್ ಕರೆಸಿಕೊಳ್ಳಲು ನಿರ್ಧರಿಸಲಾಗಿದೆ.
ಅದೇ ರೀತಿಯಾಗಿ ಭಾರತದಲ್ಲಿರುವ ಪಾಕಿಸ್ತಾನ ರಾಯಭಾರಿ ಗಡಿಪಾರು ಮಾಡಲು ಮೋದಿ ನೇತೃತ್ವದ ಸಭೆ ನಿರ್ಧರಿಸಿದೆ. ಪಾಕ್ ನಾಗರಿಕರು ತಕ್ಷಣದಿಂದಲೇ ದೇಶ ಬಿಟ್ಟು ತೊಲಗಬೇಕು 48 ಗಂಟೆ ಒಳಗಾಗಿ ದೇಶ ಬಿಟ್ಟು ತೊಲಗಬೇಕು. ಅಟಾರಿ ವಾಘ ಗಡಿ ತಕ್ಷಣ ಬಂದ್ ಗೆ ನಿರ್ಧರಿಸಿದ್ದು ಸಿಂಧೂ ನದಿ ಒಪ್ಪಂದ ಅಂತ್ಯಗೊಳಿಸಲು ಕೂಡ ಸಭೆಯಲ್ಲಿ ನಿರ್ಧರಿಸಲಾಗಿದೆ.