ನವದೆಹಲಿ : ಭಾರತದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ 8 ಉಗ್ರರನ್ನು ಬಂಧಿಸಲಾಗಿದೆ. ಪಾಕಿಸ್ತಾನದ ISI ಮತ್ತು ಬಾಂಗ್ಲಾ ಮೂಲದ ಉಗ್ರ ಸಂಘಟನೆಗಳ ನೆರವು ಹಿನ್ನೆಲೆಯಲ್ಲಿ ದೇಶದ ವಿವಿಧಡೆ ಭಾಮ ಸ್ಫೋಟಕ್ಕೆ ಎಂಟು ಉಗ್ರರು ಸಂಜು ರೂಪಿಸಿದ್ದರು ಇದೀಗ ಅವರನ್ನು ಅರೆಸ್ಟ್ ಮಾಡಲಾಗಿದೆ.
ತಮಿಳುನಾಡು ಮತ್ತು ಪಶ್ಚಿಮಬಂಗಾಳದಲ್ಲಿ ಜಂಟಿ ಕಾರ್ಯಚರಣೆಯಲ್ಲಿ ಅರೆಸ್ಟ್ ಮಾಡಲಾಗಿದೆ. ತಿರುಪ್ಪುರನ್ ಗಾರ್ಮೆಂಟ್ಸ್ ನಲ್ಲಿ ಕೆಲಸಕ್ಕೆ ಇದ್ದರು. ಪಶ್ಚಿಮ ಬಂಗಾಳದ ವಿವಿಧ ಭಾಗಗಳಲ್ಲಿ ಇಬ್ಬರು ಸಂಚುಕೋರರು ಅರೆಸ್ಟ್ ಆಗಿದ್ದಾರೆ. ದೆಹಲಿ ಕೆಂಪುಕೋಟೆ, ಚಾದನಿ ಚೌಕ್ ದೇಗುಲ ಮೇಲೆ ದಾಳಿಗೆ ಪ್ಲಾನ್ ಮಾಡಿದ್ದರು. ಬಾಂಗ್ಲಾದಲ್ಲಿ ಇದ್ದುಕೊಂಡು ನಿರ್ದೇಶನ ನೀಡುತ್ತಿದ್ದ ಕಾಶ್ಮೀರಿ ಹ್ಯಾಂಡ್ಲರ್.
ಪ್ರಮುಖ ಸ್ಥಳಗಳಲ್ಲಿ ಫ್ರೀ ಕಾಶ್ಮೀರ ಪೋಸ್ಟರ್ ಅಂಟಿಸಿದ್ದರು. ದೆಹಲಿಯ ಮೆಟ್ರೋ ಮತ್ತು ಪ್ರಮುಖ ಸ್ಥಳಗಳಲ್ಲಿ ಫ್ರೀ ಕಾಶ್ಮೀರ ಪೋಸ್ಟರ್ ಅಂಟಿಸಿದ್ದರು. ಬಂಧಿತ ಉಗ್ರರ ಬಳಿ ಇದ್ದ 8 ಮೊಬೈಲ್ ಗಳು 16 ಸಿಂಬಳನ್ನು ವಶಕ್ಕೆ ಪಡೆದಿದ್ದಾರೆ. ಲಷ್ಕರ್-ಎ-ತೈಬಾ ಸಂಘಟನೆ ಸಂಪರ್ಕ ಹೊಂದಿದ್ದ ಆರೋಪಿಗಳು ದೆಹಲಿ ಪೊಲೀಸರ ವಿಶೇಷ ಘಟಕದಿಂದ ಭಾರಿ ವಿಧ್ವಂಸಕ ಕೃತ್ಯ ತಡೆದಿದ್ದಾರೆ. ದೇಶಾದ್ಯಂತ ಭದ್ರತಾ ಸಂಸ್ಥೆಗಳು ಹೈ ಅಲರ್ಟ್ ಘೋಷಿಸಿದೆ.








