ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೆ ಆಕ್ಟಿವ್ ಆದ ಬೆಡ್ ಶೀಟ್ ಗ್ಯಾಂಗ್ ನಿಂದ ಎಟಿಎಂ ದರೋಡೆ ನಡೆಸಿದ್ದು, ATM ಗೆ ಹೋಗಿ ಬೆಡ್ ಶೀಟ್ ಗ್ಯಾಂಗ್ ಕಳ್ಳತನ ನಡೆಸಿದೆ. ಹೊಸಕೋಟೆಯ ಸೂಲಿಬೆಲೆ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲಿಬೆಲೆ ಗ್ರಾಮದಲ್ಲಿ ಎಟಿಎಂ ಕಳ್ಳತನ ನಡೆಸಿದೆ.
ಸೂಲಿಬೆಲೆಯ ಎಸ್‌ಬಿಐ ಎಟಿಎಂ ನಲ್ಲಿ ಈ ಒಂದು ಬೆಡ್ಶೀಟ್ ಗ್ಯಾಂಗ್ ಕಳ್ಳತನ ಮಾಡಿದೆ. ಆಂಧ್ರಪ್ರದೇಶ ಮೂಲದ ಕಪ್ಪು ಬಣ್ಣದ ಕ್ರೇಟಾ ಕಾರಿನಲ್ಲಿ ಬೆಡ್ ಶೀಟ್ ಹೊಂದಿಕೊಂಡೆ ಕಾರಿನಿಂದ ಇಳಿದ ಕಳ್ಳರು, ಮೊದಲು ಎಟಿಎಂ ನ ಸಿಸಿ ಕ್ಯಾಮೆರಾ ಗಳಿಗೆ ಸ್ಪ್ರೇಯನ್ನು ಹೊಡೆಯುತ್ತಾರೆ. ಕಾರಿನಲ್ಲಿದ್ದ ಇತರರು ಬಂದು ಎಟಿಎಂ ಒಳಗೆ ನುಗ್ಗಿ ಗ್ಯಾಸ್ ಕಟರ್ ಬಳಸಿ ಎಟಿಎಂ ಮಷೀನ್ ಒಡೆದು ಕಳ್ಳತನ ನಡೆಸಿದ್ದಾರೆ.
ರಸ್ತೆ ಬದಿ ಇರುವ SBI ಎಟಿಎಂನಲ್ಲಿ ರಾಜಾರೋಷವಾಗಿ ಕಳ್ಳತನ ನಡೆಸಿದ್ದಾರೆ. ಸಿನಿಮೀಯ ರೀತಿಯಲ್ಲಿ ಬೆಡ್ ಶೀಟ್ ಗ್ಯಾಂಗ್ ಈ ಒಂದು ದರೋಡೆ ನಡೆಸಿದೆ. ಕೇವಲ 6 ನಿಮಿಷದಲ್ಲಿ ಲಕ್ಷ ಹಣ ದೋಚಿ ಪರಾರಿ ಆಗಿದ್ದಾರೆ. ಪೋಲೀಸರ ಅಂದಾಜಿನ ಪ್ರಕಾರ ಎಟಿಎಂ ನಲ್ಲಿ ಇದ್ದ ಸುಮಾರು 30 ಲಕ್ಷಕ್ಕೂ ಹೆಚ್ಚು ಹಣ ಎಗರಿಸಿ ಪರಾರಿಯಾಗಿದ್ದಾರೆ. ಪ್ರಕರಣದ ಕಲಿಸಿಕೊಂಡ ಪೊಲೀಸರು ಖದೀಮರ ಬಂಧನಕ್ಕೆ ಬಲೆ ಬೀಸಿದ್ದಾರೆ.