ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಅನಂತ್ನಾಗ್ ಜಿಲ್ಲೆಯಲ್ಲಿರುವ ಪಹಲ್ಗಾಮ್ನ ಬೈಸರನ್ ಕಣಿವೆ ಪ್ರದೇಶದಲ್ಲಿ ಮಂಗಳವಾರ ನಡೆದ ಭಯೋತ್ಪಾದಕ ದಾಳಿಯಲ್ಲಿ ಕನಿಷ್ಠ 20 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
“ಮಿನಿ-ಸ್ವಿಟ್ಜರ್ಲ್ಯಾಂಡ್” ಎಂದು ಕರೆಯಲ್ಪಡುವ ಜನಪ್ರಿಯ ಪ್ರವಾಸಿ ತಾಣವಾದ ಕಣಿವೆಯಲ್ಲಿ ಗುಂಡಿನ ಸದ್ದು ಕೇಳಿದೆ ಎಂದು ವರದಿಯಾಗಿದೆ, ಈ ಪ್ರದೇಶಕ್ಕೆ ತಕ್ಷಣ ಭದ್ರತಾ ಪಡೆಗಳನ್ನು ನಿಯೋಜಿಸಲು ಮುಂದಾಗಿದೆ. ಈ ನಡುವೆ ಈ ಜಾಗವನ್ನು ಅನ್ನು ಕಾಲ್ನಡಿಗೆ ಅಥವಾ ಕುದುರೆಯ ಮೇಲೆ ಮಾತ್ರ ಪ್ರವೇಶಿಸಬಹುದು, ಇದು ರಕ್ಷಣಾ ಮತ್ತು ಪ್ರತಿಕ್ರಿಯೆ ಪ್ರಯತ್ನಗಳನ್ನು ಹೆಚ್ಚು ಸವಾಲಿನದಾಗಿಸುತ್ತದೆ.
ಗಾಯಗೊಂಡವರನ್ನು ಸ್ಥಳಾಂತರಿಸಲು ಅಧಿಕಾರಿಗಳು ಹೆಲಿಕಾಪ್ಟರ್ ಅನ್ನು ಸೇವೆ ಒದಲಿಸಲಾಗಿದೆ. ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಗಾಯಗೊಂಡವರಲ್ಲಿ ಕೆಲವರನ್ನು ಸ್ಥಳೀಯ ಜನರು ತಮ್ಮ ಕುದುರೆಗಳ ಮೇಲೆ ಕರೆ ತಂದು ಚಿಕಿತ್ಸೆ ನೀಡಿದ್ದಾರೆ ಎನ್ನಲಾಗಿದೆ.