ಬೆಳಗಾವಿ : ಸಂತ ಬಾಳು ಮಾಮಾ ಅವರು ಮಹಾರಾಷ್ಟ್ರ ಮತ್ತು ಕರ್ನಾಟಕದಾದ್ಯಂತ ಲಕ್ಷಾಂತರ ಭಕ್ತರನ್ನು ಹೊಂದಿರುವ ಶಕ್ತಿಶಾಲಿ ಮತ್ತು ಪವಾಡ ಪುರುಷರೆಂದು ಪ್ರಸಿದ್ಧರಾಗಿದ್ದಾರೆ. ಬಾಳು ಮಾಮಾ ಅವರು ತಮ್ಮ ಜೀವನದುದ್ದಕ್ಕೂ ಕುರಿಗಳನ್ನು ಕಾಯುವ ಕಾಯಕವನ್ನು ಮಾಡಿದರು. ಅವರು ಸಾಕುತ್ತಿದ್ದ ಕುರಿಗಳನ್ನು ಬಾಳು ಮಾಮಾ ಅವರ ಕುರಿಗಳು ಎಂದೇ ಕರೆಯಲಾಗುತ್ತಿತ್ತು.
ಅವರು ತಮ್ಮ ಜೀವಿತಾವಧಿಯಲ್ಲಿ ಅನೇಕ ಪವಾಡಗಳನ್ನು ಮಾಡಿದ್ದರೆಂದು ಹೇಳಲಾಗುತ್ತದೆ. ರೋಗಿಗಳನ್ನು ಗುಣಪಡಿಸುವುದು, ಮಳೆ ಬರಿಸುವುದು ಮತ್ತು ಭಕ್ತರ ಸಂಕಷ್ಟಗಳನ್ನು ದೂರಮಾಡುವ ಮೂಲಕ ಅವರು ಜನಪ್ರಿಯರಾದರು. “ಸತ್ಯ ಮತ್ತು ಸರಳತೆಯೇ ಭಗವಂತನನ್ನು ತಲುಪುವ ದಾರಿ” ಎಂಬುದು ಅವರ ಮುಖ್ಯ ಸಂದೇಶವಾಗಿತ್ತು.
ಬಾಳು ಮಾಮಾ ಅವರು ಅಕ್ಟೋಬರ್ 3, 1892 ರಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಅಕ್ಕೋಳ ಗ್ರಾಮದಲ್ಲಿ ಜನಿಸಿದರು. ಅವರ ತಂದೆ ಮಾಯಪ್ಪ ಮತ್ತು ತಾಯಿ ಸತ್ಯವ್ವ. ಬಾಲ್ಯದಿಂದಲೇ ಅವರು ಆಧ್ಯಾತ್ಮಿಕತೆಯತ್ತ ಒಲವು ಹೊಂದಿದ್ದರು. ಬಾಳು ಮಾಮಾ ಅವರು ಆಗಸ್ಟ್ 19, 1966 ರಂದು ಕೊಲ್ಲಾಪುರ ಜಿಲ್ಲೆಯ ಆದಮಾಪುರದಲ್ಲಿ (Admapur) ದೈಹಿಕವಾಗಿ ಅಗಲಿದರು. ಅಲ್ಲಿಯೇ ಅವರ ಭವ್ಯವಾದ ಸಮಾಧಿ ಮಂದಿರವಿದೆ. ಇದೀಗ ಸಂತ ಬಾಳುಬಾಮಾ ಅವರ 2026 ರ ಸ್ಪೋಟಕ ಭವಿಷ್ಯವಾಣಿ ತಿಳಿದು ಬಂದಿದೆ.
1) ಭಾರತ ದೇಶದ ದೊಡ್ಡ ನಾಯಕರ ಹತ್ಯೆಯಾಗುವ ಸಾಧ್ಯತೆ.
2) ಮೂರನೇ ಮಹಾಯುದ್ಧ ಭುಗಿಲೇಳುವ ಸಾಧ್ಯತೆ.
3) ಅಂತರರಾಷ್ಟ್ರೀಯ ಮಾರುಕಟ್ಟೆ ಕೆಲವು ಕಾಲ ಮುಚ್ಚಿರುವ ಸಾಧ್ಯತೆ.
4) ವಿನಾಶದ ಸರದಿ ನಮ್ಮ ದೇಶದ ಮೇಲೆ ಬರುವ ಸಂಕೇತಗಳು.
5) ಬೆಲೆ ಏರಿಕೆ ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗುವ ಸಾಧ್ಯತೆ.
6) ರೈಲು ಮತ್ತು ದೊಡ್ಡ ವಾಹನಗಳ ಅಪಘಾತಗಳು ನಡೆಯುವ ಸಾಧ್ಯತೆ.
7) ಕೊಲ್ಲಾಪುರದ ದೇವಿಯ ಕಣ್ಣುಗಳಿಂದ ನೀರು ಬರುವ ಸಂಕೇತ.
8) ಅಣ್ಣ-ತಂಗಿಯ/ಅಕ್ಕ-ತಮ್ಮನ ಸಂಬಂಧದ ಮೇಲೆ ಕಳಂಕ ಬರುವ ಸಂಕೇತ.
9) ಜಗತ್ತಿನಲ್ಲಿ ಸತ್ಯವನ್ನು ಮೋಸಗೊಳಿಸಲಾಗುತ್ತದೆ ಎಂಬ ಸಂಕೇತಗಳು.
10 ) ೧೨ ವರ್ಷದ ಹುಡುಗಿ ತಾಯಿಯಾಗುವ ಘಟನೆಗಳು.
11) ೧೦೦ ವರ್ಷಗಳ ನಂತರ ಮನುಷ್ಯ ಭೂಮಿಯನ್ನು ಬಿಡುತ್ತಾನೆ ಎಂಬ ಭವಿಷವಾಣಿ








