ಹಾಸನ : ರಾಜ್ಯ ರಾಜಕೀಯದಲ್ಲಿ ಇದೀಗ ಭಾರಿ ವಿಚಾರ ಚರ್ಚೆಗೆ ಗ್ರಾಸವಾಗಿದ್ದು, ಡಿಸಿಎಂ ಡಿಕೆ ಶಿವಕುಮಾರ್ ಶಕ್ತಿಯುತ ಖಡ್ಗಮಾಲಾ ಸ್ತೋತ್ರ ಹಾಗೂ ನಾರಾಯಣಿ ಪೂಜೆ, ಇಷ್ಟಾರ್ಥ ಸಿದ್ದಿಗಾಗಿ ನಾರಾಯಣಿ ಮಂತ್ರದೊಂದಿಗೆ ಡಿಸಿಎಂ ಡಿಕೆ ಶಿವಕುಮಾರ್ ಪೂಜೆ ಸಲ್ಲಿಸಿದ್ದಾರೆ. ಶತ್ರುಗಳ ಮೇಲೆ ವಿಜಯದ ಸಂಕೇತವಾಗಿ ಈ ಒಂದು ಪೂಜೆ ಮಾಡಿಸಿದ್ದು, 5 ನಿಮಿಷಗಳ ಕಾಲ ಶಕ್ತಿಯುತವಾದ ಖಡ್ಗಮಾಲಾ ಸ್ತೋತ್ರವನ್ನು ಡಿಸಿಎಂ ಡಿಕೆ ಶಿವಕುಮಾರ್ ಸ್ಪಟಿಸಿ ವಿಶೇಷವಾಗಿ ಪ್ರಾರ್ಥನೆ ಮಾಡಿದ್ದಾರೆ.
ಹೌದು ಹಾಸನಾಂಬೆ ದೇಗುಲದಲ್ಲಿ ಶಕ್ತಿಯುತವಾದ ಖಡ್ಗಮಾಲಾ ಸ್ತೋತ್ರ ಪಠಿಸಿ ನಾರಾಯಣಿ ಮಂತ್ರದೊಂದಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ ಅತ್ಯಂತ ಪ್ರಬಲ ಪೂಜೆ ಇದಾಗಿದ್ದು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಚಂಡಿಕಾ ಹೋಮ ಮಾಡುವಂತಹ ವೇಳೆ ಈ ಮಂತ್ರವನ್ನು ಪಠಿಸಲಾಗಿದೆ. ನಿನ್ನೆ ಕುಟುಂಬದ ಸಮೇತ ಅವರು ಹಾಸನ ಪಡೆದು ಸಲ್ಲಿಸಿದರು. ಅದು ನಮಗೆ ಸೀರೆ ಬಳೆ ಅರ್ಪಣೆ ಮಾಡಿ ಶತ್ರುವಿನ ಮೇಲೆ ವಿಜಯದ ಸಂಕೇತವಾಗಿ ಪೂಜೆ ಸಲ್ಲಿಸಿದ್ದಾರೆ.
ಈ ವೇಳೆ ಮಾತನಾಡಿದ ಅವರು, ನನಗೆ ಸಿಎಂ ಸ್ಥಾನ ಸಿಗುವ ವಿಚಾರ ನನಗೆ ಮತ್ತು ಆ ಭಗವಂತನಿಗೆ ಮಾತ್ರ ಗೊತ್ತಿದೆ. ಭಕ್ತನಿಗೂ ಭಗವಂತನಿಗೂ ವ್ಯವಹಾರ ನಡೆಯುವ ಸ್ಥಳ ದೇವಾಲಯ. ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಇಲ್ಲಿನ ಶಕ್ತಿ ದೇವತೆಯ ಭಾಗ್ಯ ನಮ್ಮಲ್ಲರಿಗೆ ಸಿಕ್ಕಿದೆ ಎಂದು ಡಿಕೆಶಿ ಹೇಳಿದರು. ದುರ್ಗಿಯ ಸ್ವರೂಪಿ, ಶಾರದೆ ಸ್ವರೂಪಿಯಾದ ತಾಯಿ ಹಾಸನಾಂಬೆಯ ದರ್ಶನ ಭಾಗ್ಯ ನಮ್ಮಲ್ಲರಿಗೂ ಸಿಕ್ಕಿದೆ. ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಶಕ್ತಿ ದೇವತೆಯಾಗಿದ್ದು, ಭಕ್ತರ ದುಃಖವನ್ನು ಪರಿಹರಿಸುತ್ತಾಳೆ ಎಂದರು.
ಭಕ್ತರು ತಮಗೆ ನೆಮ್ಮದಿ, ಶಾಂತಿಯ ಬದುಕನ್ನು ಕೊಡು ಎಂದು ತಾಯಿಯಲ್ಲಿ ಬೇಡಿಕೊಳ್ಳುತ್ತಾರೆ. ಭಕ್ತನಿಗೂ ಭಗವಂತನಿಗೂ ವ್ಯವಹಾರ ನಡೆಯುವ ಸ್ಥಳ ದೇವಾಲಯ. ಎಲ್ಲ ಜನರು ವಿಶೇಷವಾದ ದರ್ಶನ ಪಡೆಯುತ್ತಿದ್ದಾರೆ. ನಾನು ಪ್ರತೀ ವರ್ಷವೂ ದೇವಿಯ ದರ್ಶನ ಪಡೆಯಲು ಬರುತ್ತಿದ್ದೇನೆ. ಅಂತೆಯೇ ಇಂದು ನಾನು, ನನ್ನ ಪತ್ನಿಯ ಕುಟುಂಬಸ್ಥರು ದೇವಿಯ ದರ್ಶನ ಪಡೆದಿದ್ದೇವೆ ಎಂದು ಹೇಳಿದರು.