ಬೆಂಗಳೂರು : ಬೆಂಗಳೂರು ಗ್ರಾಮಂತರ ಜಿಲ್ಲೆಯ ಆನೇಕಲ್ ಸಮೀಪದ ಜಿಗಣಿ ಮತ್ತು ಪಿಣ್ಯದಲ್ಲಿ ನೆಲೆಸಿದ್ದ ಪಾಕಿಸ್ತಾನ ಪ್ರಜೆಗಳ ಬಂಧನ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಎರಡು ಪ್ರತ್ಯೇಕ ದೂರು ದಾಖಲಿಸಿಕೊಂಡ ಪೊಲೀಸರು ನ್ಯಾಯಾಲಯಕ್ಕೆ ಒಂದು ಪ್ರಕರಣದ ಚಾರ್ಜ್ ಶೀಟ್ ಅನ್ನು ಆನೇಕಲ್ ಕೋರ್ಟ್ ಗೆ ಜಿಗಣಿ ಪೊಲೀಸರು ಸಲ್ಲಿಸಿದ್ದಾರೆ. ಈ ಒಂದು ಚಾರ್ಜ್ ಶೀಟ್ ನಲ್ಲಿ ಸ್ಫೋಟಕ ವಾದಂತಹ ವಿಷಯ ಬಹಿರಂಗವಾಗಿದೆ.
ಹೌದು ಪಾಕಿಸ್ತಾನ ಪ್ರಜೆಗಳ ಬಂಧನ ಕೇಸ್ ಗೆ ಸಂಬಂಧಿಸಿದಂತೆ ಆನೇಕಲ್ ಕೋರ್ಟಿಗೆ ಜಿಗಣಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಒಟ್ಟು 22 ಆರೋಪಿಗಳ ವಿರುದ್ಧ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿತ್ತು. ಇದೀಗ ಅದರಲ್ಲಿ ಒಂದು ಪ್ರಕರಣದ 1000 ಪುಟಗಳ ಚಾರ್ಜ್ ಶೀಟ್ ಅನ್ನು ಇದೀಗ ಪೊಲೀಸರು ಆನೇಕಲ್ ಕೋರ್ಟ್ ಗೆ ಸಲ್ಲಿಸಿದ್ದಾರೆ. ಆದರೆ ಚಾರ್ಜ್ ಶೀಟ್ ನಲ್ಲಿ ಬೆಚ್ಚಿ ಬೀಳಿಸುವ ವಿಷಯ ಬಹಿರಂಗವಾಗಿದೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ A1 ಆರೋಪಿ ರಶೀದ್ ಅಲಿ ಸಿದ್ದಿಕಿ ಪಾಕಿಸ್ತಾನ ಮೂಲದವನು ಎಂಬುದು ಸಾಬೀತಾಗಿದೆ. ಆತನ ಪಾಕ್ ನ ಶಾಶ್ವತ ನಿವಾಸ ಪ್ರಮಾಣ ಪತ್ರವನ್ನು ಪೊಲೀಸರು ಕಲೆ ಹಾಕಿದ್ದಾರೆ. ಅಕ್ರಮವಾಗಿ ಪಾಕಿಸ್ತಾನದ ಪ್ರಜೆಗಳು ಬೆಂಗಳೂರಿಗೆ ಬಂದಿದ್ದಾರೆ. ಪಾಕಿಸ್ತಾನ ಪ್ರಜೆಗಳ ಬೆಂಗಳೂರು ಪ್ರವೇಶ ಸಂಬಂಧ ತನಿಖೆ ಪೂರ್ಣವಾಗಿದೆ. ಮೊದಲ ಕೇಸ್ ನಲ್ಲಿ 12 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.
ಒಟ್ಟು 12 ಆರೋಪಿಗಳಲ್ಲಿ 8 ಜನ ಪುರುಷರು ಮೂವರು ಮಹಿಳೆಯರು ಹಾಗೂ ಓರ್ವ ಬಾಲಕಿ ಇದ್ದಾಳೆ. ಪೊಲೀಸರ ತನಿಖೆಯ ವೇಳೆ ಹಲವು ಮಹತ್ವದ ವಿಚಾರಗಳು ಬೆಳಕಿಗೆ ಬಂದಿವೆ. ಹಣ ವರ್ಗಾವಣೆ, ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ್ದು ತನಿಖೆಯ ವೇಳೆ ತಿಳಿದು ಬಂದಿದೆ. ಅಲ್ಲದೆ ಇನ್ನು 15 ದಿನಗಳಲ್ಲಿ ಮತ್ತೊಂದು ಪ್ರಕರಣದ ಚಾರ್ಜ ಶೀಟ್ ಅನ್ನು ಪೊಲೀಸರು ಸಲ್ಲಿಸಲಿದ್ದಾರೆ.
ಪ್ರಕರಣದ ಒಟ್ಟು 22 ಜನರನ್ನು ಪಾಕಿಸ್ತಾನದ ನಿವಾಸಿಗಳು ಬಹಿಷ್ಕರಿಸಿದ್ದರು. ಬಳಿಕ ಪಾಕಿಸ್ತಾನವನ್ನು ತೊರೆದು ಈ 22 ಆರೋಪಿಗಳು ಭಾರತಕ್ಕೆ ಅಕ್ರಮವಾಗಿ ಪ್ರವೇಶ ಮಾಡಿದ್ದರು. ವೀಸಾ ಪಾಸ್ಪೋರ್ಟ್ ಇಲ್ಲದೆ ಪಾಕಿಸ್ತಾನ ಪ್ರಜೆಗಳು ಅಕ್ರಮವಾಗಿ ಪ್ರವೇಶಿಸಿದ್ದರು.ದೆಹಲಿಯಲ್ಲಿ ನಕಲಿ ಜನನ ಪ್ರಮಾಣ ಪತ್ರ ಮತ್ತು ಆಧಾರ್ ಕಾರ್ಡ್ ಮಾಡಿಸಿಕೊಂಡಿದ್ದರು. ಇಂಡಿಯನ್ ಪಾಸ್ಪೋರ್ಟ್ ಸಹ ಪಾಕಿಸ್ತಾನ ಈ ಒಂದು ತಂಡ ಮಾಡಿಕೊಂಡಿತ್ತು.
ಮುಸ್ಲಿಂ ಹೆಸರುಗಳನ್ನು ಹಿಂದುಗಳ ಹೆಸರುಗಳನ್ನಾಗಿ ಬದಲಾಯಿಸಿಕೊಂಡಿದ್ದರು. ಭಾರತದ ಬೇರೆ ಬೇರೆ ರಾಜ್ಯಗಳಲ್ಲಿ ವಾಸ ಮಾಡಿರುವುದು ಬೆಳಕಿಗೆ ಬಂದಿದೆ. ದೆಹಲಿ ಬೆಂಗಳೂರು ಹೈದರಾಬಾದ್ ಸೇರಿದಂತೆ ಹಲವೆಡೆ ಇವರು ವಾಸವಿದ್ದರು. ಕಳೆದ ಮೂರು ನಾಲ್ಕು ವರ್ಷಗಳ ಹಿಂದೆ ಪಾಕಿಸ್ತಾನ ಪ್ರಜೆಗಳು ರಾಜ್ಯಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಅಲ್ಲದೇ ದಾವಣಗೆರೆ ನಂತರ ಬೆಂಗಳೂರಿಗೆ ಬಂದು ಪಾಕಿಸ್ತಾನ ಪ್ರಜೆಗಳು ನೆಲೆಸಿದ್ದಾರೆ. ಆನೇಕಲ್ ಸಮೀಪದ ಜಿಗಣಿ ಮತ್ತು ಪಿಣ್ಯದಲ್ಲಿ ಈ ಒಂದು ಆರೋಪಿಗಳು ನೆಲೆಸಿದ್ದರು. ಯೂಟ್ಯೂಬ್ ಚಾನೆಲ್ನಲ್ಲಿ ಧರ್ಮ ಬೋಧನೆ ಮಾಡುತ್ತಿದ್ದರು ಎನ್ನಲಾಗಿದೆ. ಮೆಹದಿ ಫೌಂಡೇಶನ್ ನಲ್ಲಿ ಬಂಧಿತ ಆರೋಪಿಗಳು ಇದ್ದರೂ. ಎಲ್ಲಾ ಅಂಶಗಳ ಬಗ್ಗೆಯೂ ಜಿಗಣಿ ಪೊಲೀಸರು ತನಿಖೆ ನಡೆಸಿದ್ದಾರೆ. ಪಾಕಿಸ್ತಾನ ಪ್ರಜೆಗಳು ಸೇರಿದಂತೆ ಹಲವು ಮಂದಿಯ ಹೇಳಿಕೆಗಳನ್ನು ದಾಖಲಿಸಲಾಗಿದೆ.
ತಾಂತ್ರಿಕ ಸಾಕ್ಷಿಗಳು, ಸಿಡಿಆರ್ ರಿಪೋರ್ಟ್, ಟವರ್ ಡಂಪ್ ಯುಟ್ಯೂಬ್ ಚಾನೆಲ್ ವಿವರವನ್ನು ಪೊಲೀಸರು ಕಲೆ ಹಾಕಿದ್ದಾರೆ.ಆರೋಪಿಗಳ ಬಳಿ ಇದ್ದಂತಹ ಮೊಬೈಲ್ ನಲ್ಲಿರುವ ಆಡಿಯೋ ವಿಡಿಯೋ ಕೂಡ ದಾಖಲಾಗಿವೆ. ಎಲ್ಲವನ್ನು ಜಿಗಣಿ ಠಾಣೆ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿ ಸಲ್ಲಿಸಿದ್ದಾರೆ.