ಬೆಂಗಳೂರು : ಒಂದುಕಡೆ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡಲೇಬೇಕು ಎಂದು ವಿಪಕ್ಷಗಳು ಆಗ್ರಹಿಸುತ್ತಿದ್ದರೆ, ಮತ್ತೊಂದು ಕಡೆ ಸಿಎಂ ಸಿದ್ದರಾಮಯ್ಯ ಅವರು ನಾನು ಯಾವುದೇ ತಪ್ಪು ಮಾಡಿಲ್ಲ ರಾಜೀನಾಮೆ ಕೊಡಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಲೇ ಬಂದಿದ್ದಾರೆ. ಇದರ ಮಧ್ಯ ದಲಿತ ಸಿಎಂ ವಿಚಾರ ಮುನ್ನೆಲೆಗೆ ಬಂದಿದ್ದು ದಲಿತ ಸಿಎಂ ಆಗಲೇಬೇಕು ಅನ್ನೋದು ನಮ್ಮೆಲ್ಲರ ಒತ್ತಾಯವಾಗಿದೆ ಎಂದು ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿಕೆ ನೀಡಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸ್ಥಾನ ಪಲ್ಲಟವಾದರೆ ದಲಿತರು ಸಿಎಂ ಆಗುವ ನಂಬಿಕೆ ಇದೆ. ಸಿಎಂ ಹುದ್ದೆಯ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಸಿಎಂ ಹುದ್ದೆಯ ಬಗ್ಗೆ ಬೀದಿಯಲ್ಲೋ ಸ್ವಾಮೀಜಿಗಳು ಮಾತನಾಡುವುದಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ದಲಿತರು ಶೋಷಿತರ ಪರ ಇದ್ದಾರೆ. ಯಾವುದೇ ಪಕ್ಷ ಇರಲಿ ದಲಿತ ಸಿಎಂ ರಾಜ್ಯಕ್ಕೆ ಅಗತ್ಯವಿದೆ.ಕಾಂಗ್ರೆಸ್ ಪಕ್ಷದಲ್ಲಿ ದಲಿತ ಮುಖ್ಯಮಂತ್ರಿ ಕೂಗು ವಿಚಾರವಾಗಿ ಉರಿಲಿಂಗಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಹೇಳಿಕೆ ನೀಡಿದರು.
ದಲಿತರನ್ನು ಸಿಎಂ ಮಾಡದಿದ್ದರೆ ಯಾವ ಪಕ್ಷದವರು ತಲೆ ಎತ್ತಿ ಬರುವಂತಿಲ್ಲ. ಇನ್ನು ಮುಂದೆ ದಲಿತ ಶೋಷಿತರ ಬೀದಿಗೆ ಯಾವ ಪಕ್ಷದವರು ಬರುವಂತಿಲ್ಲ. ಸಂವಿಧಾನದಲ್ಲಿ ಸ್ವಾತಂತ್ರ್ಯ ನ್ಯಾಯ ಸಮಾನತೆ ಅಂತ ಓದುತ್ತೇವೆ. ಗೋಡೆಯ ಮೇಲೆ ಅಲ್ಲ ಅದನ್ನು ವಿಧಾನಸೌಧದಲ್ಲಿ ತೋರಿಸಬೇಕು. ದಲಿತ ಸಿಎಂ ಆಗಲೇಬೇಕು ಅನ್ನೋದು ನಮ್ಮೆಲ್ಲರ ಒತ್ತಾಯವಾಗಿದೆ. ಎಂದು ಬೆಂಗಳೂರಿನಲ್ಲಿ ಉರಿಲಿಂಗಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಹೇಳಿಕೆ ನೀಡಿದರು.