ಮೈಸೂರು : ರಾಜ್ಯದಲ್ಲಿ ಹೃದಯಾಘಾದ ಸರಣಿ ಸಾವು ಮುಂದುವರೆದಿದ್ದು, ಮೈಸೂರಿನಲ್ಲಿ ಕೂಡ ಯುವಕನೋರ್ವ ಹೃದಯಘಾತಕ್ಕೆ ಬಲಿಯಾಗಿದ್ದಾನೆ. ದರ್ಶನ್ ಎನ್ನುವ ಯುವಕ ಹೃದಯಘಾತದಿಂದ ಸಾವನಪ್ಪಿದ್ದು, ದರ್ಶನ್ ಸಾವಿನಿಂದ ಆತನ ಸ್ನೇಹಿತರು, ಕುಟುಂಬಸ್ಥರು ಶಾಕ್ ಗೆ ಒಳಗಾಗಿದ್ದಾರೆ.
ದರ್ಶನ್ಗೆ ಯಾವುದೇ ರೀತಿಯ ಕೆಟ್ಟ ಅಭ್ಯಾಸಗಳು ಇರಲಿಲ್ಲ. ಆದರೆ ದರ್ಶನಕ್ಕೆ ಎರಡು ದಿನದಿಂದ ಕೆಮ್ಮು ಇತ್ತು ವೈದ್ಯರು ಕೂಡ ಪರಿಶೀಲನೆ ಮಾಡಿ ಇದು ಸಾಮಾನ್ಯ ಕೆಮ್ಮು ಅಂತ ಹೇಳಿದ್ದರು ಆದರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಆತ ಸಾವನಪ್ಪಿದ್ದಾನೆ. ಆತ ಪೇಂಟ್ ಅಂಗಡಿ ಒಂದನ್ನು ಇಟ್ಟುಕೊಂಡಿದ್ದ. ಯಾವುದೇ ರೀತಿಯಾಗಿ ಕೆಟ್ಟ ಚಟಗಳು ಇರಲಿಲ್ಲ ಆರಾಮಾಗಿಯೇ ಇದ್ದ.
ನಿನ್ನೆ ಅಂಗಡಿಯಲ್ಲಿದ್ದಾಗ ನನಗೆ ಸ್ವಲ್ಪ ಸುಸ್ತು ಅಂತ ಹೇಳಿ ಸುಮ್ನೆ ಆದ ಮತ್ತೆ ಮನೆಗೆ ಹೋದ 11:30ಕ್ಕೆ ಸುಸ್ತಾಗಿ ತಲೆ ಸುತ್ತುತ್ತಿದೆ ಆಗಿದೆ ಬೇಗ ಬನ್ನಿ ಅಂತ ಕರೆ ಮಾಡಿದ್ದ. ಮನೆಗೆ ಬರುವಷ್ಟರಲ್ಲಿಯೇ ವೀಕ್ ಆಗಿದ್ದ ಹಾಸ್ಪಿಟಲ್ಗೆ ಕರೆದುಕೊಂಡು ಹೋಗುವಾಗಲೇ ವೈದ್ಯರು ಮೃತಪಟ್ಟಿರುವುದು ದೃಢಪಡಿಸಿದ್ದಾರೆ ಎಂದು ಆತನ ಸ್ನೇಹಿತರು ತಿಳಿಸಿದ್ದಾರೆ.