ಕೋಲಾರ : ಕೋಲಾರ ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ ನಿನ್ನೆ ಕೋಲಾರದ ತೋಟಗಾರಿಕೆ ವಿ.ವಿ. ಕಟ್ಟಡದಲ್ಲಿ ಮತ್ತೆ ಮರು ಮತ ಎಣಿಕೆ ನಡೆಸಲಾಯಿತು ಬಳಿಕ ಶಾಸಕ ಕೆ.ವೈ ನಂಜೇಗೌಡ ಫಲಿತಾಂಶದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂಬ ಸುಳಿವನ್ನು ನೀಡಿದರು.
ಬೆಳಗ್ಗೆ 8 ಗಂಟೆಯಿಂದ ಆರಂಭವಾದ ಮತಗಳ ಎಣಿಕೆ ಪ್ರಕ್ರಿಯೆಯು ಸುಮಾರು 12 ತಾಸುಗಳ ಕಾಲ ಸತತವಾಗಿ ನಡೆಯಿತು. ಮಾಲೂರು ಕ್ಷೇತ್ರದ ಹಾಲಿ ಶಾಸಕ ಕೆ.ವೈ.ನಂಜೇಗೌಡ ಹಾಗೂ ಮರುಮತ ಎಣಿಕೆಗೆ ಆಗ್ರಹಿಸಿದ್ದ ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ಕೆ. ಎಸ್. ಮಂಜುನಾಥಗೌಡ ಹಾಗೂ ಪಕ್ಷೇತರ ಅಭ್ಯರ್ಥಿ ಹೂಡಿ ವಿಜಯ್ ಕುಮಾರ್ ಬೆಳಿಗ್ಗೆ ಮತ ಎಣಿಕೆ ಕೇಂದ್ರವನ್ನು ಪ್ರವೇಶಿಸಿದ್ದರು.
ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಚುನಾವಣ ಆಯೋಗವು ಮಂಗಳವಾರ ಮತಗಳ ಮರು ಎಣಿಕೆ ಕಾರ್ಯವನ್ನು ಪೊಲೀಸ್ ಸರ್ಪಗಾವಲಿನಲ್ಲಿ ನಡೆಸಿತು.ಮಧ್ಯಾಹ್ನದ ವೇಳೆಗೆ ಮರುಮತ ಎಣಿಕೆ ಕಾರ್ಯ ಮುಕ್ತಾಯವಾಗಬಹುದೆಂಬ ನಿರೀಕ್ಷೆ ಇತ್ತಾದರೂ ರಾತ್ರಿ 8 ಗಂಟೆಯವರೆಗೂ ಮುಂದುವರಿಯಿತು. ಇದರಿಂದ ಅಭ್ಯರ್ಥಿಗಳ ಬೆಂಬಲಿಗರು ನಿರಾಸೆಗೊಳಗಾದರು.








