ತುಮಕೂರು : ಇತ್ತೀಚಿಗೆ ಪತ್ನಿಯರ ಕಾಟಕ್ಕೆ ಗಂಡಂದಿರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ ಇಡೀ ದೇಶದಾದ್ಯಂತ ಭಾರಿ ಸದ್ದು ಮಾಡಿತ್ತು. ಇದೀಗ ತುಮಕೂರಿನಲ್ಲಿ ಪತ್ನಿಯ ಕಾಟಕ್ಕೆ ಪತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದೆ.
ಹೌದು ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಅರಸಾಪುರ ಗ್ರಾಮದ ನಂಜೇಗೌಡ ಎಂಬುವನೇ ನೇಣು ಬಿಗಿದುಕೊಂಡು ಆತಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾನೆ. ಈತ ಹೆಂಡತಿ ಲಾವಣ್ಯಳಿಂದ ಬಹಳಷ್ಟು ಕಿರುಕುಳ ಅನುಭವಿಸಿ ಮನನೊಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಮೂಲತಃ ಅರಸಾಪುರದ ಗ್ರಾಮದ ನಿವಾಸಿಯಾಗಿರುವ ನಂಜೇಗೌಡ, ಸ್ವಗ್ರಾಮಕ್ಕೆ ತೆರಳದಂತೆ ಪತ್ನಿ ತಡೆಯುತ್ತಿದ್ದಳು. ಅಲ್ಲದೇ ತಂದೆ ತಾಯಿಯ ಜೊತೆ ಬಿಡದೆ ಗಂಡನನ್ನ ಪದೇ ಪದೇ ತಡೆಯುತ್ತಿದ್ದ ಹೆಂಡತಿಯ ಕಿರುಕುಳ ತಾಳಲಾರದೆ ನಂಜೇಗೌಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆ ಕುರಿತಂತೆ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.